ಮಂಡ್ಯದಲ್ಲಿ ಸುಮಲತಾ ಗೆಲುವು ಖಚಿತ ಎಂದ ನಟ ಕಮ್ ಶಾಸಕ..!!

03 Apr 2019 4:21 PM | Politics
4036 Report

ಮಂಡ್ಯದ ಪಕ್ಷೇತರ ಅಭ್ಯರ್ಥಿಯಾಗಿ ಈಗಾಗಲೇ ಸುಮಲತಾ ಅಖಾಡಕ್ಕೆ ಇಳಿದಿದ್ದಾರೆ. ಸುಮಲತಾ ಪರ ಸ್ಯಾಂಡಲ್ ವುಡ್ ನ ಸ್ಟಾರ್ಸ್ ಗಳೆ ಅಖಾಡಕ್ಕೆ ಇಳಿದು ಮತಬೇಟೆ ಮಾಡುತ್ತಿದ್ದಾರೆ. ಸ್ಟಾರ್ಸ್ ಗಳು ಅಖಾಡಕ್ಕೆ ಇಳಿದಿರುವುದರಿಂದ ಸುಮಲತಾ ಗೆಲುವು ಪಕ್ಕಾ ಎಂದು ಹೇಳಲಾಗುತ್ತಿದೆ.. ಒಂದು ಕಡೆ ರಾಜಕೀಯ ನಾಯಕರು ದೋಸ್ತಿ ಅಭ್ಯರ್ಥಿಯಾದ ನಿಖಿಲ್ ಗೆಲುವಿಗಾಗಿ ಟೊಂಕಕಟ್ಟಿ ನಿಂತಿದ್ದಾರೆ. ಮತ್ತೊಂದು ಕಡೆ ಸುಮಲತಾ ಅವರನ್ನು ಗೆಲ್ಲಿಸಲೇ ಬೇಕು ಎಂದು ಸ್ಯಾಂಡಲ್ ವುಡ್ ಸ್ಟಾರ್ಸ್ ಗಳು ಅಂಬಿ ಅಭಿಮಾನಿಗಳು ನಿಂತಿದ್ದಾರೆ.  ಇದೀಗ  ಸುಮಲತಾ ಗೆಲುವು ನಿಶ್ಚಿತ ಎಂದು ಕಾಂಗ್ರೆಸ್ ಶಾಸಕ ಬಿ ಸಿ ಪಾಟೀಲ್ ತಿಳಿಸಿದ್ದಾರೆ.

ಯಶ್​-ದರ್ಶನ್ ಪ್ರಚಾರದಿಂದ ಸುಮಲತಾ ಅವರಿಗೆ ಲಾಭವಾಗಲಿದೆ ಅಂತ ಕಾಂಗ್ರೆಸ್​ ಶಾಸಕ ಬಿ.ಸಿ. ಪಾಟೀಲ್​ ಅವರು ಹೇಳಿದ್ದಾರೆ. ಇಂದು  ಹಾವೇರಿ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ  ಸಿಎಂ ಎಚ್​.ಡಿ. ಕುಮಾರಸ್ವಾಮಿ ಮತ್ತು ಸಚಿವ ಜಿ.ಟಿ. ದೇವೇಗೌಡ ಸೇರಿ ಹಲವು ನಾಯಕರು ಚಿತ್ರನಟರ ಪ್ರಚಾರದಿಂದ ಅಭ್ಯರ್ಥಿಗೆ ಮತವಾಗಿ ಪರಿವರ್ತನೆಗೊಳ್ಳುವುದಿಲ್ಲ ಎನ್ನುವ ಹೇಳಿಕೆಗೆ ಸಂಬಂಧಪಟ್ಟಂತೆ ಮಾತನಾಡಿರುವ ಅವರು ಚಿತ್ರನಟರ ಪ್ರಚಾರದಿಂದ ಜನಬೆಂಬಲ ವೋಟುಗಳಾಗಿ ಪರಿವರ್ತನೆಗೊಳ್ಳುವ ಬಗ್ಗೆ ಜನರು ತೀರ್ಮಾನಿಸುತ್ತಾರೆ ಎಂದು ತಿಳಿಸಿದ್ದಾರೆ. ಇನ್ನು ದರ್ಶನ್​ ಮತ್ತು ಯಶ್​ ಅವರು ನಿರಂತರವಾಗಿ ಜನರೊಂದಿಗೆ ಸಂಪರ್ಕ ಮತ್ತು ಒಡನಾಟ ಹೊಂದಿದ್ದಾರೆ. ಇದು ಮತಗಳಾಗಿ ಪರಿವರ್ತನೆಗೊಳ್ಳುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು. ಒಟ್ಟಾರೆಯಾಗಿ ಸ್ಟಾರ್ ಗಳು ಕ್ಯಾಂಪೇನ್ ಮಾಡುತ್ತಿರುವುದು ಸುಮಲತಾ ಅಂಬರೀಶ್ ಗೆ ಫ್ಲಸ್ ಪಾಯಿಂಟ್ ಎನ್ನಬಹುದಾಗಿದೆ. ಮೇ 23 ಕ್ಕೆ ಬರುವ ಚುನಾವಣೆಯ ಫಲಿತಾಂಶದ ಹಿನ್ನಲೆಯಲ್ಲಿ ಯಾರು ಅಧಿಕಾರದ ಗದ್ದುಗೆಯನ್ನು ಹಿಡಿಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments