ಇಂದು ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ `ಬಿಜೆಪಿ'ಗೆ ಸೇರ್ಪಡೆ..!?

03 Apr 2019 1:26 PM | Politics
210 Report

ಲೋಕ ಸಭಾ ಚುನಾವಣೆಗೆ ಈಗಾಗಲೇ  ದಿನಗಣನೆ ಪ್ರಾರಂಭವಾಗಿದೆ.. ಆದರೂ ಕೂಡ ಇನ್ನೂ ಪಕ್ಷದಿಂದ ಪಕ್ಷಕ್ಕೆ ಹಾರುವ ಕೆಲಸ ಮಾತ್ರ ಕಡಿಮೆಯಾಗಿಲ್ಲ.. ದೋಸ್ತಿ ಸರ್ಕಾರದಿಂದ ಜಿಜೆಪಿಗೆ, ಬಿಜೆಪಿಯಿಂದ ದೋಸ್ತಿಗಳ ತೆಕ್ಕೆಗೆ ಹೋಗುವುದು ಕಾಮನ್ ಆಗಿಬಿಟ್ಟಿದೆ.. ಇದಕ್ಕೆ ಅನಿಸುತ್ತದೆ.. ರಾಜಕೀಯ ಎನ್ನುವುದು ದೊಂಬರಾಟ ಎನ್ನುವುದು.. ಅತೃಪ್ತ ಶಾಸಕರನ್ನು ಸೆಳೆಯುವಲ್ಲಿ ಕೆಲವು ಪಕ್ಷಗಳು ಸಕ್ಸಸ್ ಆದರೆ ಇನ್ನುಳಿದ ಪಕ್ಷಗಳು ಸೋಲುತ್ತವೆ.ಇದೀಗ ಮತ್ತೊಬ್ಬರು ಬಿಜೆಪಿಗೆ ಸೇರಿಕೊಳ್ಳುತ್ತಿದ್ದಾರೆ ಎಂಬ ಮಾತು ಹರಿದಾಡುತ್ತಿದೆ.

ಲೋಕಸಭೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಅವರು ಇಂದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ. ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಇಂದು ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ನಾಮಪತ್ರ ಸಲ್ಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಲಬುರಗಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆಗಮಿಸಲಿದ್ದು, ಈ ವೇಳೆ ಬಿಎವೈ ನೇತೃತ್ವದಲ್ಲಿ ರತ್ನಪ್ರಭಾ ಅವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲ ದಿನಗಳ ಹಿಂದೆ ರತ್ನಪ್ರಭಾ ಅವರು ಬಿಜೆಪಿ ಸೇರ್ಪಡಯಾಗಿ ಕಲಬುರ್ಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ದಿಸುತ್ತಾರೆ ಎಂದು ಹೇಳಲಾಗಿತ್ತು.. ಒಟ್ಟಾರೆಯಾಗಿ ಲೋಕಸಭಾ ಚುನಾವಣೆ ಹತ್ತಿರ ಬರುವುದರೊಳಗೆ ಯಾರು ಪಕ್ಷದಿಂದ ಯಾವ ಪಕ್ಷಕ್ಕೆ ಹಾರುತ್ತಾರೋ ಗೊತ್ತಿಲ್ಲ..

Edited By

Manjula M

Reported By

Manjula M

Comments