ಸ್ಟಾರ್ ಪ್ರಚಾರಕ್ಕಿಂತಲೂ ಸಿಕ್ತು ಸುಮಲತಾ ಅಂಬರೀಶ್’ಗೆ ಮತ್ತೊಂದು ಆನೆ ಬಲ..!?

03 Apr 2019 10:08 AM | Politics
10112 Report

ಲೋಕ ಸಮರಕ್ಕೆ ಇನ್ನೇನೂ ದಿನಗಣನೆ ಪ್ರಾರಂಭವಾಗಿದೆ. ಅಭ್ಯರ್ಥಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಚಾರ ಕಾರ್ಯವನ್ನು ಮಾಡುತ್ತಿದ್ದಾರೆ. ಎಲ್ಲಾ ಅಖಾಡಕ್ಕಿಂತಲೂ ಮಂಡ್ಯ ಅಖಾಡ ಮಾತ್ರ ದಿನದಿಂದ ದಿನಕ್ಕೆ ರಣರಂಗವಾಗುತ್ತಿದೆ.. ಯಾವುದಾರೊಂದು ವಿಷಯಕ್ಕೆ ಪದೇ ಪದೇ  ಸುದ್ದಿಯಾಗುತ್ತಿದೆ.. ಒಂದು ಕಡೆ ನಿಖಿಲ್ ಮತ್ತೊಂದು ಕಡೆ ಸುಮಲತಾ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ.. ನಾನಾ ನೀನಾ ಎನ್ನುವಂತೆ ಸವಾಲನ್ನು ಹಾಕಿಕೊಂಡು ಪ್ರಚಾರವನ್ನು ಮಾಡುತ್ತಿದ್ದಾರೆ.. ಇದೆಲ್ಲದರ ನಡುವೆ ಸುಮಲತಾ ಗೆ ಮತ್ತೊಂದು ಆನೆ ಬಲ ಸಿಕ್ಕಂತೆ ಆಗಿದೆ.

ಅಂಬರೀಶ್ ಅವರಿಗೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧ ಇದೆ. ನಮ್ಮ ತಂದೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್​, ಅಂಬರೀಶ್​ ಜೊತೆಯಲ್ಲಿ 35 ವರ್ಷಗಳ ಒಡನಾಟ ಇಟ್ಟುಕೊಂಡಿದ್ದರು ಎಂದು ಯದುವೀರ್ ಒಡೆಯರ್ ಅಂಬರೀಶ್ ಅವರನ್ನು ಕೊಂಡಾಡಿದರು. ಮೈಸೂರಿನಲ್ಲಿ ಮಾತನಾಡಿದ ಯದುವೀರ್ ಒಡೆಯರ್  ಅರಮನೆಯ ಕಷ್ಟದ ಸಾಕಷ್ಟು ಸಂದರ್ಭದಲ್ಲಿ ಅಂಬರೀಶ್ ಅವರು ಬೆನ್ನೆಲುಬಾಗಿ ನಿಂತಿ ನಮ್ಮನ್ನ ಸಹಕರಿಸಿದ್ದರು.. ಅವರ ಸಹಾಯವನ್ನು ನಾವು ಯಾವತ್ತು ಮರೆಯುವಂತಿಲ್ಲ. ಅವರಿಗೆ ಮೈಸೂರು ರಾಜ ಮನೆತನ ಎಂದಿಗೂ ಕೃತಜ್ಞವಾಗಿರುತ್ತದೆ ಎಂದು ರಾಜ ವಂಶಸ್ಥ ಯದುವೀರ್ ಒಡೆಯರ್ ಅಂಬಿ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹಾಡಿದರು…  

ಸುಮಲತಾ ಮಂಡ್ಯದಲ್ಲಿ ಸ್ಪರ್ಧೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅವರು ಹೋರಾಟಕ್ಕೆ ಒಳ್ಳೆಯದಾಗಲಿ. ಬಹಿರಂಗ ಪ್ರಚಾರಕ್ಕೆ ನಾನು ತೆರಳುವುದಿಲ್ಲ. ನಾನು ರಾಜಕೀಯದಿಂದ ದೂರ ಇದ್ದೇನೆ. ಮಂಡ್ಯದ ಜನರಿಗೆ ಗೊತ್ತಿದೆ. ಮುಂದಿನ ದಿನಗಳಲ್ಲಿ ಅವರೇ ಉತ್ತರ ನೀಡಲಿದ್ದಾರೆ ಎಂದು ಪರೋಕ್ಷವಾಗಿ ಸುಮಲತಾ ಅಂಬರೀಶ್​ಗೆ ಬೆಂಬಲ ಸೂಚಿಸಿದರು.ಒಟ್ಟಾರೆಯಾಗಿ ಸುಮಲತಾ ಪರವಾಗಿ ಈಗಾಗಲೇ ಸ್ಟಾರ್ ಪ್ರಚಾರಕರು ಕ್ಯಾಂಪೇನ್ ಶುರು ಮಾಡಿಕೊಂಡಿದ್ದಾರೆ. ಕುಟುಂಬ ರಾಜಕಾರಣವನ್ನು ನಿಲ್ಲಿಸಬೇಕು ಎಂಬ ಮಾತುಗಳು ಕೇಳಿಬಂದರೂ ಕೂಡ, ಜೆಡಿಎಸ್ ನ ಭದ್ರ ಕೋಟೆಯಾಗಿರುವ ಮಂಡ್ಯದಲ್ಲಿ ನಿಖಿಲ್ ಗೆಲ್ಲುವುದಾಗಿ ಮಾತುಗಳು ಕೇಳಿ ಬರುತ್ತಿವೆ.. ಒಟ್ಟಾರೆಯಾಗಿ ಮಂಡ್ಯ ಅಖಾಡದಿಂದ ಗೆದ್ದು ಯಾರು ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Edited By

Kavya shree

Reported By

Manjula M

Comments