ಮಂಡ್ಯದ ಅಳಿಯ ನಾನಲ್ಲ, ಮಂಡ್ಯದ ಮಗ ನಾನು : ‘ಜಾಗ್ವಾರ್’ ನಾಯಕನಿಗೆ  'ತಿರುಗೇಟು' ಕೊಟ್ಟ ‘ಅಮರ್’

30 Mar 2019 11:45 AM | Politics
294 Report

ಮಂಡ್ಯದಲ್ಲಿ ಲೋಕಸಭಾ ಚುನಾವಣೆಯ ಮಹಾಯುದ್ದ  ಜೋರಾಗಿಯೇ ನಡೆಯುತ್ತಿದೆ.. ಒಂದು ಕಡೆ ನಿಖಿಲ್ ಮತ್ತೊಂದು ಕಡೆ ಸುಮಲತಾ ಇಬ್ಬರ ನಡುವೆ ಮಹಾಯುದ್ದವೇ ನಡೆಯುತ್ತಿದೆ.. ಈಗಾಗಲೇ ಇವಿಎಂ ನಂಬರ್’ಗಳು ಕೂಡ ಬಂದಿದ್ದಾಗಿದೆ.. ಸುಮಲತಾ ಅಂಬರೀಶ್ ಪಕ್ಷೇತರವಾಗಿ ಅಖಾಡಕ್ಕೆ ಇಳಿದಿದ್ದಾರೆ..ನಿಖಿಲ್ ರಾಜಕೀಯ ನಾಯಕರು ಬೆಂಬಲ ಸೂಚಿಸಿದರೆ ಸುಮಲತಾ ಗೆ ಸ್ಯಾಂಡಲ್ ವುಡ್ ಸ್ಟಾರ್ಸ್’ಗಳು ಬೆಂಬಲ ಸೂಚಿಸುತ್ತಿದ್ದಾರೆ. ಒಟ್ಟಿನಲ್ಲಿ ಮಂಡ್ಯ ಅಖಾಡ ಮಾತ್ರ ದಿನದಿಂದ ದಿನಕ್ಕೆ ರಂಗೇರುತ್ತಿದೆ.

ಪ್ರಚಾರದ ವೇಳೆ ಮಂಡ್ಯದ ಹುಡುಗಿ ಸಿಕ್ಕರೆ ನಾನು ಮಂಡ್ಯದ ಅಳಿಯನಾಗುತ್ತೇನೆ ಎಂದಿದ್ದರು. ಆದರೆ ಇದೀಗ ಆ ಮಾತಿಗೆ ಅಭಿಷೇಕ್ ಅಂಬರೀಶ್ ಟಾಂಗ್ ನೀಡಿದ್ದಾರೆ. ನಾನು ಮಂಡ್ಯದ ಅಳಿಯನಲ್ಲ. ನಾನು ಮಂಡ್ಯದ ಮಗ ಅಂತ ಅಭಿಷೇಕ್ ಅವರು ಮಂಡ್ಯ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.ಮದ್ದೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ನಾನು ಮಂಡ್ಯ ಕ್ಷೇತ್ರಕ್ಕೆ ನಿನ್ನೆ ಮೊನ್ನೆ ಬಂದಿಲ್ಲ. ಇಲ್ಲಿನ ಹುಡುಗಿಯನ್ನು ಮದುವೆಯಾಗಿ ಮಂಡ್ಯದವನೆಂದು ಕರೆಸಿಕೊಳ್ಳುವ ಅವಶ್ಯಕತೆ ನನಗಿಲ್ಲ. ನಾನು ಮಂಡ್ಯದ ಅಳಿಯನಲ್ಲ. ನಾನು ಮಂಡ್ಯದ ಮಗ ಎಂದು ತನ್ನ ಆಪ್ತ ಮಿತ್ರ ನಿಖಿಲ್ ಕುಮಾರಸ್ವಾಮಿಗೆ ಸಖತ್ತಾಗಿಯೇ ಟಾಂಗ್ ನೀಡಿದ್ದಾರೆ. ಒಟ್ಟಾರೆಯಾಗಿ ಗೆಳಯರಾಗಿದ್ದ ಇವರಿಬ್ಬರು ಲೋಕ ಸಮರ ಮುಗಿಯುವುದರೊಳಗೆ ದುಷ್ಮನ್ ಆಗೋದ್ರರಲ್ಲಿ ನೋ ಡೌಟ್..

Edited By

Manjula M

Reported By

Manjula M

Comments