ಅಂಬಿಗೆ ಪುನರ್ಜನ್ಮ ಕೊಟ್ಟಿದ್ದೆ ನಾವು ಎಂದ ಜೆಡಿಎಸ್ ಸಚಿವ..!! ಯಾರ್ ಗೊತ್ತಾ..?

29 Mar 2019 4:39 PM | Politics
1290 Report

ಅದ್ಯಾಕೋ ಗೊತ್ತಿಲ್ಲ.. ಮಂಡ್ಯ ಅಖಾಡ ತಣ್ಣಗೆ ಆಗುವಂತೆ ಕಾಣುತ್ತಿಲ್ಲ… ಮಂಡ್ಯ ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತ ಹೋಗುತ್ತಿದೆ. ಪಕ್ಷೇತರ  ಅಭ್ಯರ್ಥಿಯಾದ ಸುಮಲತಾ ವಿರೋಧವಾಗಿಯೇ ದೋಸ್ತಿ ಸರ್ಕಾರ ನಿಂತಿದೆ.. ಜೆಡಿಎಸ್ ಶಾಸಕರ ಮನೆ ಮೇಲೆ ನಡೆದ ಐಟಿ ದಾಳಿಗೂ ಕೂಡ ಸುಮಲತಾನೇ ಕಾರಣ ಎಂದು ಬೆರಳು ಮಾಡಿ ತೋರಿಸುತ್ತಿದ್ದಾರೆ.. ಇದನ್ನೆಲ್ಲಾ ಚಾಲೆಂಜ್ ಆಗಿ ಸ್ವೀಕರಿಸಿತ್ತೇವೆ ಎಂದು ಸುಮಲತಾ ತಿಳಿಸಿದ್ದಾರೆ..

ಇದೆಲ್ಲಾದರ ನಡುವೆ ಸಚಿವ ಸಿ,ಎಸ್ ಪುಟ್ಟರಾಜು ಅವರು ಸುಮಲತಾ ಅವರಿಗೆ ಹೊಸದೊಂದು ಸವಾಲು ಹಾಕಿದ್ದಾರೆ. ಮಂಡ್ಯದಲ್ಲಿ ಮಾತನಾಡಿರುವ ಸಚಿವ ಪುಟ್ಟರಾಜು, ಸುಮಲತ ಅವರು ಅಂಬರೀಶ್ ಸಮಾಧಿ ಬಳಿ ಪೂಜೆ ಮಾಡಲು ಹೋದಾಗ ಪುಟ್ಟರಾಜು ಅವರು ರಾಜಕೀಯವಾಗಿ ನಮ್ಮ ಕುಟುಂಬಕ್ಕೆ ಏನೇನು ಸಹಾಯ ಮಾಡಿದ್ದಾರೆ ಅಂತ ಅಂಬರೀಶ್ ಅಣ್ಣನ ಮುಂದೆ ಸುಮಲತಾ ಅವರು ಕೇಳಿಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ. ಇದೇ ವೇಳೆ ಅವರು ಅಂಬಿಗೆ ಮಂಡ್ಯದಲ್ಲಿ ರಾಜಕೀಯ ಪುನರ್ಜನ್ಮ ಕೊಟ್ಟಿದ್ದು ನಾನೇ ಅವರು ರಾಮನಗರದಲ್ಲಿ ಸೋತ ಬಳಿಕ ಅವರನ್ನು ಮಂಡ್ಯಕ್ಕೆ ಕರೆ ತಂದು, ಇಲ್ಲಿಂದಲ್ಲೇ ಅವರಿಗೆ ಚುನಾವಣೆಯಲ್ಲಿ ಕಣಕ್ಕೆ ಇಳಿಯುವಂತೆ ಮನವಿ ಮಾಡಿಕೊಂಡೆ. ಕೊನೆಗೂ ಅವರು ಒಪ್ಪಿಕೊಂಡು ಇಲ್ಲಿಂದಲೇ ಅವರು ಸ್ಪರ್ಧೆ ಮಾಡಿ ಲೋಕಸಭಾ ಸದ್ಯಸರಾಗಿ ಆಯ್ಕೆಯಾದರು ಅಂತ ಹೇಳಿದರು. ಒಟ್ಟಾರೆಯಾಗಿ ಮಂಡ್ಯ ಲೋಕಸಭಾ ಅಖಾಡದಲ್ಲಿ ಜೆಡಿಎಸ್ ಗೆ ಸೋಲಿನ ಭಯ ಕಾಣಿಸುತ್ತಿದೆ.,.. ಹಾಗಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ ಎಂಬ ಮಾತುಗಳನ್ನು ಆಡುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಾರು ಅಧಿಕಾರದ ಗದ್ದುಗೆಯನ್ನು ಹಿಡಿಯುತ್ತಾರೆ ಎಂಬುದುನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments