‘ಕಮಲ’ ಬಿಟ್ಟು ‘ಕೈ’ ಹಿಡಿದ ಶಾಸಕರು..!! ಯಾರ್ ಗೊತ್ತಾ..?

29 Mar 2019 1:40 PM | Politics
3565 Report

ಲೋಕಸಭಾ ಚುನಾವಣೆ ಬಂದಮೇಲೆ ಅತೃಪ್ತ ಶಾಸಕರು ಪಕ್ಷ ಬಿಟ್ಟು ಪಕ್ಷಕ್ಕೆ ಹಾರುತ್ತಿದ್ದಾರೆ.. ಕಾಂಗ್ರೆಸಿನಿಂದ ಜೆಡಿಎಸ್, ಜೆಡಿಎಸ್ ನಿಂದ ಬಿಜೆಪಿಗೆ, ಬಿಜೆಪಿಯಿಂದ ದೋಸ್ತಿ ಸರ್ಕಾರಕ್ಕೆ ಪಕ್ಷಿಗಳಂತೆ ಹಾರಾಟ ನಡೆಸುತ್ತಿದ್ದಾರೆ. ಇತ್ತಿಚಿಗಷ್ಟೆ  ದೋಸ್ತಿ ಸರ್ಕಾರದ ಎ ಮಂಜು ಮತ್ತು ಉಮೇಶ್ ಜಾಧವ್ ದೋಸ್ತಿ ಗೆ ಗುಡ್ ಬೈ ಹೇಳಿ ಅಧಿಕೃತವಾಗಿ ಕಮಲಕ್ಕೆ ಹಿಡಿಯಲು ಹೊರಟರು.. ಇದರಿಂದ ದೋಸ್ತಿಗಳು ಸ್ವಲ್ಪ ಗಲಿಬಿಲಿಗೊಂಡಿದ್ದರು…

ಇದೀಗ ಉಮೇಶ್ ಜಾಧವ್ ಗೆ ಟಿಕೆಟ್ ಘೋಷಣೆಯಿಂದ ಅಸಮಾಧಾನಗೊಂಡು ಬಿಜೆಪಿಗೆ ರಾಜೀನಾಮೆ ನೀಡಿದ್ದ ಬಂಜಾರ ಸಮುದಾಯದ ಹಿರಿಯ ನಾಯಕರಾದ ಮಾಜಿ ಸಚಿವ ಬಾಬುರಾವ್ ಚವ್ಹಾಣ್ ಹಾಗೂ ಸುಭಾಷ್ ರಾಠೋಡ್ ಕಾಂಗ್ರೆಸ್ ಸೇರಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಇಂದು ಚಿಂಚೋಳಿ ಪಟ್ಟಣದಲ್ಲಿ ಆಯೋಜಿಸಿರುವ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಸಂಸದ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಉಭಯ ನಾಯಕರು ಮತ್ತವರ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿದ್ದು, ಬಿಜೆಪಿಗೆ ದೊಡ್ಡ ಶಾಕ್ ಆಗಿದೆ. ಒಟ್ಟಿನಲ್ಲಿ ಲೋಕ ಸಮರ ಮುಗಿಯುವಷ್ಟರಲ್ಲಿ ಯಾರು ಯಾವ ಪಕ್ಷದ ಜೊತೆ ಕೈ ಜೋಡಿಸುತ್ತಾರೋ ಗೊತ್ತಿಲ್ಲ…

Edited By

Manjula M

Reported By

Manjula M

Comments