ಸಿಎಂ ಕುಮಾರಸ್ವಾಮಿಗೆ ತಲೆ ನೋವು ತಂದ ಡಿಕೆಶಿ ಹೇಳಿಕೆ…!! ಹಾಗಾದ್ರೆ ಡಿಕೆಶಿ ಹೇಳಿದ್ದೇನು..?

28 Mar 2019 5:34 PM | Politics
16824 Report

ಮಂಡ್ಯ ಅಖಾಡ ಅದ್ಯಾಕೋ ತಣ್ಣಗೆ ಆಗುವ ರೀತಿಯಲ್ಲಿ ಕಾಣುತ್ತಿಲ್ಲ.. ದಿನಕ್ಕೊಂದು ಸಮಸ್ಯೆ ಎದುರಾಗುತ್ತಲೆ ಇವೆ.. ಒಂದು ಕಡೆ ನಿಖಿಲ್ ಮತ್ತೊಂದು ಕಡೆ ಸುಮಲತಾ.. ಇಬ್ಬರು ಕೂಡ ಜಿದ್ದಾಜಿದ್ದಿಗೆ ಬಿದ್ದಿದ್ದಾರೆ.. ಸುಮಲತಾ ಪರ ಸ್ಟಾರ್ ನಾಯಕರು ಪ್ರಚಾರ ಮಾಡಿದರೆ ನಿಖಿಲ್ ಪರ ರಾಜಕೀಯ ನಾಯಕರು ಪ್ರಚಾರ ಮಾಡುತ್ತಿದ್ದಾರೆ ಈಗಾಗಲೆ ನಿಖಿಲ್ ಪರ ಮುಖ್ಯಮಂತ್ರಿ ಕುಮಾರಸ್ವಾಮಿ., ಡಿಕೆ ಶಿವಕುಮಾರ್ ಸೇರಿದಂತೆ ಸಾಕಷ್ಟು ನಾಯಕರು ಪ್ರಚಾರ ಮಾಡುತ್ತಿದ್ದಾರೆ.

ಆದರೆ ನಿಖಿಲ್ ಪರವಾಗಿ ಪ್ರಚಾರ ಮಾಡುವ ಸಮಯದಲ್ಲಿ ಡಿಕೆಶಿ ಹೇಳಿದ ಒಂದು ಮಾತು ಇದೀಗ ಸಿಎಂ ಗೆ ತಲೆನೋವಾಗಿದೆ. ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿದರೆ ಅಂಬರೀಷ್​ ಆತ್ಮಕ್ಕೆ ಶಾಂತಿ ಸಿಗುತ್ತೆ' ಎಂದಿದ್ದ ಡಿಕೆಶಿ ಮಾತು ಈಗ ಸಿಎಂ ಕುಮಾರಸ್ವಾಮಿಗೆ ತಲೆನೋವಾಗಿ ಪರಿಣಮಿಸಿದೆ. ಸಚಿವ ಡಿಕೆ ಶಿವಕುಮಾರ್​​ ಅವರ ಅಂಬರೀಷ್​ ಕುರಿತಾದ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಸಿಎಂ ಕುಮಾರಸ್ವಾಮಿ ಡಿಕೆಶಿ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಈ ಬಗ್ಗೆ ಅವರ ಬಳಿ ಕೇಳಿದರೆ, ' ಅದು ನನಗೆ ಗೊತ್ತಿಲ್ಲ, ಹೇಳಿರುವವರನ್ನು ಹೋಗಿ ಕೇಳಿ' ಎನ್ನುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಸಚಿವ ಎಚ್​.ಡಿ.ರೇವಣ್ಣ ಸುಮಲತಾ ಬಗ್ಗೆ ಹಗುರವಾಗಿ ಮಾತನಾಡಿದ್ದರು. ಗಂಡ ಸತ್ತು ಆರು ತಿಂಗಳಾಗಿಲ್ಲ, ರಾಜಕೀಯಕ್ಕೆ ಬಂದಿದ್ದಾರೆ ಎಂದು ಹೇಳಿದ್ದರು. ಈ ವಿಷಯಕ್ಕೆ ರಾಜಕೀಯ ವಲಯದಲ್ಲಿ ಅನೇಕ ಟೀಕೆಗಳು ವ್ಯಕ್ತವಾಗಿದ್ದವು. ಈ ವೇಳೆ ಸಿಎಂ ಕುಮಾರಸ್ವಾಮಿ ಕ್ಷಮೆಯಾಚಿದ್ದರು. ಇದೀಗ ಡಿಕೆ ಶಿವಕುಮಾರ್ ಅವರ ಈ ಹೇಳಿಕೆ ನಿಖಿಲ್ ಸೋಲಿಗೆ ಕಾರಣವಾಗುತ್ತ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments