ಸುಮಲತಾ ಅಂಬರೀಶ್ ಗೆ ಎದುರಾಯ್ತು ಮತ್ತೊಂದು ಸಂಕಷ್ಟ..!!!  

26 Mar 2019 5:47 PM | Politics
9097 Report

ಈಗಾಗಲೇ ಮಂಡ್ಯ ಲೋಕ ಸಭಾಚುನಾವಣೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಾಮಪತ್ರವನ್ನು ಸಲ್ಲಿಸಿದ್ದಾರೆ.. ಒಂದುಕಡೆ ನಿಖಿಲ್ ಮತ್ತೊಂದು ಕಡೆ ಸುಮಲತಾ ಪೈಪೋಟಿ ಭರ್ಜರಿಯನ್ನು ಎದುರಿಸಿದ್ದಾರೆ… ಇದೇ ಸಮಯದಲ್ಲಿ  ಸುಮಲತಾ ಅಂಬರೀಶ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ…ಒಂದೇ ಹೆಸರಿನ ಅಭ್ಯರ್ಥಿಗಳು ಕಣಕ್ಕೆ ಇಳಿಯುವುದು ಸಾಮಾನ್ಯ, ಈಗ ಅದೇ ರೀತಿ ಮಂಡ್ಯದಲ್ಲೂ ಕೂಡ ಮುಂದುವರೆದಿದೆ.

ಮಂಡ್ಯ ಅಖಾಡ ದಿನದಿಂದ ದಿನಕ್ಕೆ ರಣರಂಗವಾಗುತ್ತಿದೆ.. ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಅಂಬರೀಷ್​ ಅವರ ವಿರುದ್ಧ ಸುಮಲತಾ ಎಂಬ ಹೆಸರಿನ ಮೂವರು ಮಹಿಳೆಯರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಸುಮಲತ ಅಂಬರೀಶ್ ಅವರಿಗೆ ಮತ್ತೊಂದು ಸಂಕಷ್ಟ ಶುರುವಾಗಿದ್ದು, ಮತದಾರರನ್ನು ಗೊಂದಲಕ್ಕೆ ಈಡು ಮಾಡುವ ಸಲುವಾಗಿ ಹೀಗೆ ಮಾಡಲಾಗುತ್ತಿದೆ ಎನ್ನಲಾಗಿದೆ. ಕನಕಪುರದ ರಂಗನಾಥ ಬಡಾವಣೆಯ ದರ್ಶನ್ ಎಂಬವರು ಪತ್ನಿ ಟಿ.ಸುಮಲತಾ ಕೆ.ಆರ್.ಪೇಟೆ ತಾಲೂಕಿನ ಸಂತೆಬಾಚಹಳ್ಳಿ ಬಳಿಯ ಗೊರವಿ ಗ್ರಾಮದ ಮಂಜೇಗೌಡರ ಪತ್ನಿ ಸುಮಲತಾ, ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ.ಹೊಸೂರು ಗ್ರಾಮದ ಸಿದ್ದೇಗೌಡರ ಪತ್ನಿ ಸುಮಲತಾ ಎನ್ನುವ ಮೂವರು ನಾಮಪತ್ರ ಸಲ್ಲಿಸಿದ್ದಾರೆ. ಒಟ್ಟಾರೆಯಾಗಿ ಸುಮಲತಾ ಅವರನ್ನು ಸೋಲಿಸಲು ಈ ರೀತಿಯಾಗಿ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.. ಮಗನ ಗೆಲುವಿಗಾಗಿ ಟೊಂಕ ಕಟ್ಟಿ ನಿಂತಿರುವ ಸಿಎಂ ಕುಮಾರಸ್ವಾಮಿ ಮಗನನ್ನು ಗೆಲ್ಲಿಸಲು ಗತಾಯ ಶತಾಯ ಪ್ರಯತ್ನ ಪಡುತ್ತಿದ್ದಾರೆ ಎನ್ನಲಾಗುತ್ತಿದೆ.

Edited By

Manjula M

Reported By

Manjula M

Comments