ಇಂದು ಯಾರ್ಯಾರು, ಎಲ್ಲಿಂದ ನಾಮಪತ್ರ ಸಲ್ಲಿಸಿದ್ದಾರೆ ಗೊತ್ತಾ? ಇಲ್ಲಿದೆ ಕಂಪ್ಲೀಟ್ ಮಾಹಿತಿ..

25 Mar 2019 3:48 PM | Politics
225 Report

ಲೋಕಸಮರ ಚುನಾವಣೆ ಸಮೀಪಿಸುತ್ತದೆ…  ಈಗಾಗಲೇ ಕೆಲವು ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದ್ದಾರೆ.. ಆದರೆ ಇಂದು ಬಹುತೇಕ ಅಭ್ಯರ್ಥಿ ನಾಮಪತ್ರವನ್ನು ಸಲ್ಲಿಸಿದ್ದಾರೆ.. ಲೋಕಸಭಾ ಚುನಾವಣೆಯ ಅಖಾಡಗಳು ದಿನದಿಂದ ದಿನಕ್ಕೆ ರಂಗೇರುತ್ತಿವೆ.. ಈ ನಡುವೆ ರಾಜ್ಯದಲ್ಲಿ ಮೊದಲ ಹಂತದಲ್ಲಿ ನಡೆಯುವ 14 ಕ್ಷೇತ್ರಗಳ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆ ಕೊನೆಯ ದಿನವಾಗಿದೆ. ಆದರೆ ನಾಳೆ ಮಂಗಳವಾಗಿರುವ ಎನ್ನುವ ಕಾರಣಕ್ಕಾಗಿ ಇಂದು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಬೆಂಗಳೂರು ಉತ್ತರ ಕ್ಷೇತ್ರದಿಂಧ ಬಿಜೆಪಿ ಅಭ್ಯರ್ಥಿಯಾಗಿ ಡಿ.ವಿ.ಸದಾನಂದಗೌಡರು

ತುಮಕೂರು ಲೋಕಸಭಾ ಕ್ಷೇತ್ರದಿಂದ ಮಾಜಿ ಪ್ರಧಾನಿ ದೇವೇಗೌಡರು

ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ

ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್​ ಸಿಂಹ

ಮೈಸೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್​ನ ಸಿ.ಎಚ್. ವಿಜಯ್​ಶಂಕರ್​

ಹಾಸನದಲ್ಲಿ ಬಿಜೆಪಿ ಟಿಕೆಟ್​ ಪಡೆದಿರುವ ಎ ಮಂಜು

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಎಂ.ವೀರಪ್ಪ ಮೋಯ್ಲಿ

ಅಷ್ಟೆ ಅಲ್ಲದೇ ಬಿಜೆಪಿಯಿಂದ ಬಿ.ಎನ್.ಬಚ್ಚೇಗೌಡ

ಬಿಎಸ್ಪಿಯಿಂದ ದ್ವಾರಕಾನಾಥ್

ಸಿಪಿಐಎಂ ನಿಂದ ವರಲಕ್ಷ್ಮೀ ಸಹ ಇಂದೇ ನಾಮಪತ್ರ ಸಲ್ಲಿಸಿದ್ದಾರೆ. ಇವರುಗಳ ಜೊತೆಗೆ ಇನ್ನೂ ಹಲವರು ನಾಮಪತ್ರ ಸಲ್ಲಿಸಿದ್ದಾರೆ.

Edited By

Manjula M

Reported By

Manjula M

Comments