ಬಿಗ್ ಬ್ರೇಕಿಂಗ್ : ಡಿ ಬಾಸ್, ರಾಕಿ ಬಾಯ್ ಹೋದ್ರೆ ಏನಂತೆ.. !! ಸುಮಲತಾಗೆ ಸಿಕ್ತು ಮತ್ತೊಂದು ಆನೆಬಲ..??

22 Mar 2019 3:12 PM | Politics
16952 Report

ಈಗಾಗಲೇ ನಿಗಧಿಯಾಗಿರುವ ಲೋಕಸಭಾ ಚುನಾವಣೆಗೆ ಎಲ್ಲಾ ರೀತಿಯ ಸಿದ್ದತೆಗಳು ನಡೆಯುತ್ತಿವೆ. ಆದರೆ ಮಂಡ್ಯದಲ್ಲಿ ಮಾತ್ರ ಚುನಾವಣಾ ಕಾವು ಹೆಚ್ಚಾಗುತ್ತಲೆ ಇದೆ.. ಹೈವೋಲ್ಟೆಜ್ ಅಖಾಡವಾಗಿರುವ ಮಂಡ್ಯದ ರಂಗು ಸದ್ಯಕ್ಕಂತೂ ಕಡಿಮೆಯಾಗೋದಿಲ್ಲ… ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಾಗಿದ್ದ ಸುಮಲತಾಗೆ ದೋಸ್ತಿ ಸರ್ಕಾರ ಟಿಕೇಟ್ ನೀಡದ ಕಾರಣ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.

ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಸುಮಲತಾ ಅಂಬರೀಶ್ ಅವರ ಪರವಾಗಿ ಬಿಜೆಪಿ ಶಾಸಕರೊಬ್ಬರು ಪ್ರಚಾರಕ್ಕೆ ಹೋಗುವುದಾಗಿ ಹೇಳುವುದರ ಮೂಲಕ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.  ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ನಲ್ಲಿ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಸುಮಲತಾ ಅವರು ಬಿಜೆಪಿ ಸೇರುತ್ತಾರೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿದ್ದವು. ಆದರೆ ಕೊನೆಗೆ ಸುಮಲತಾ ಅವರು ಸ್ವತಂತ್ರವಾಗಿ ಸ್ಪರ್ಧಿಸುವ ನಿರ್ಧಾರ ಕೈಗೊಂಡಿದ್ದಾರೆ. ಈ ಕುರಿತು ಮಾತನಾಡಿದ ಸೊರಬ ಬಿಜೆಪಿ ಶಾಸಕ ಕುಮಾರ ಬಂಗಾರಪ್ಪ ಅವರು, ಮಂಡ್ಯದಲ್ಲಿ ಸುಮಲತಾ ಅಂಬರೀಶ್ ತೆಗೆದುಕೊಂಡ ನಿರ್ಧಾರ ಸೂಕ್ತವಾಗಿದೆ. ಮಂಡ್ಯದಲ್ಲಿ ಸುಮಲತಾ ಪರ ಅವಕಾಶ ಸಿಕ್ಕರೆ ಚುನಾವಣಾ ಪ್ರಚಾರ ಮಾಡುತ್ತೇನೆ ಎಂದು ಹೇಳಿದ್ದಾರೆ. ಬಿಜೆಪಿಯವರು ಮಾತ್ರವಲ್ಲದೆ ಮಂಡ್ಯದ ಜನತೆ, ಅಂಬಿ ಅಭಿಮಾನಿಗಳು, ಕಾಂಗ್ರೆಸ್ ನ ಕೆಲವು ಶಾಸಕರು, ಚಿತ್ರರಂಗದ ಕೆಲವರು ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.

Edited By

Manjula M

Reported By

Manjula M

Comments