ಮತ್ತೆ ಏಕಾಂಗಿಯಾದ ಸುಮಲತಾ..!!  ಫೇಸ್’ಬುಕ್ ನಲ್ಲಿ ರೆಬಲ್ ಪತ್ನಿ ಹೀಗೆ ಬರೆದುಕೊಂಡಿದ್ಯಾಕೆ..!?

22 Mar 2019 10:47 AM | Politics
10773 Report

ಮಂಡ್ಯ ಲೋಕಸಭಾ ಅಖಾಡದ ಪ್ರಚಾರದ ರಂಗು ಹೆಚ್ಚಾಗುತ್ತಿದೆ.. ಈಗಾಗಲೇ ನಾಮಪತ್ರ ಸಲ್ಲಿಸಿರುವ ಸುಮಲತಾ ಸ್ಟಾರ್ಸ್ ಗಳ ಮಧ್ಯೆ ನಿಂತು ಪ್ರಚಾರ ಪ್ರಾರಂಭ ಮಾಡಿದ್ದಾರೆ.. ಇತ್ತ ನಿಖಿಲ್ ಕೂಡ ಜನಗಳ ಮಧ್ಯೆ ಪ್ರಚಾರ ಪ್ರಾರಂಭ ಮಾಡಿದ್ದಾರೆ.  ಸುಮಲತಾ ಪರ ನಿಂತ ದರ್ಶನ್ ಮತ್ತೆ ಯಶ್ ಇದೀಗ ಜನರ ಬಾಯಿಗೆ ಆಹಾರವಾಗಿದ್ದಾರೆ.  30 ದಿನ ಇಲ್ಲೇ ಇರ್ತೇವೆ ಪರೇಡ್ ನಡೆಸ್ತೇವೆ, ಪಂಚೆ ಎತ್ತಿ ಕಟ್ತೇವೆ. ನಾವೇನು ಅಂತಾ ತೋರಿಸುತ್ತೇವೆ ಅಂತೆಲ್ಲಾ ಸಿನಿಮಾ ಡೈಲಾಗ್​​ ಹೊಡೆದಿದ್ದ ಯಶ್ ಮತ್ತು ದರ್ಶನ್​​ ಎರಡು ದಿನಗಳಿಂದ ನಾಪತ್ತೆಯಾಗಿದ್ದಾರೆ. ಕಡೆಗೆ ಏಕಾಂಗಿಯಾದ ಸುಮಲತಾ ಇಂದು ತಾವೇ ಪ್ರಚಾರಕ್ಕೆ ಬರುವುದಾಗಿ ತಮ್ಮ ಫೇಸ್​ಬುಕ್​​ನಲ್ಲಿ ಹಂಚಿಕೊಂಡಿದ್ದಾರೆ..

ಸುಮಲತಾ ತಮ್ಮ ಫೇಸ್​ಬುಕ್​ನಲ್ಲಿ ಇಂದು ಕೆ.ಆರ್​​ನಗರಕ್ಕೆ ಬರುತ್ತಾ ಇದ್ದೇನೆ. ಚುನಾವಣಾ ಪ್ರಚಾರಕ್ಕಾಗಿ ನನ್ನೊಂದಿಗೆ ಅಭೀನೂ ನನ್ನ ಜೊತೆ ಇರ್ತಾನೆ. ಮಂಡ್ಯದ ಉಸಿರು ಉಸಿರಿನಲ್ಲೂ ಅಂಬರೀಶ್ ಇದ್ದಾರೆ. ಈ ಉಸಿರಿಗಾಗಿ ಕೆಲಸ ಮಾಡುವುದು ನನ್ನ ಕರ್ತವ್ಯ. ನನ್ನ ಜನರಿಗಾಗಿ ನನ್ನ ಹೆಜ್ಜೆ ಎಂದು ಸುಮಕ್ಕ ಬರೆದುಕೊಂಡಿದ್ದಾರೆ. ಆದರೆ ಯಶ್ ಮತ್ತು ದರ್ಶನ್​​ ಬರುವ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನೂ ಸುಮಕ್ಕ ನೀಡಿಲ್ಲ. ಮಂಡ್ಯದ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ಯಶ್, ದರ್ಶನ್​​ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಅಂದು ಡೈಲಾಗ್​​ ಹೊಡೆದು ಹೋಗಿದ್ರಿ. ಇಂದು ಎಲ್ಲಿಗೆ ಹೋಗಿದ್ದೀರಿ. ಏಕಾಂಗಿ ಮಾಡಿದ್ರಾ ಸುಮಕ್ಕಾರನ್ನು..ಮತ್ತೊಂದೆಡೆ ಯೋಧ ಗುರು ಕುಟುಂಬಕ್ಕೆ ಯಾವ ಸಹಾಯವನ್ನೂ ಯಶ್​ ಮತ್ತು ಡಿ ಬಾಸ್ ಮಾಡಿಲ್ಲ. ಮೊನ್ನೆ ಮಂಡ್ಯಗೆ ಬಂದಾಗಲೂ ಇಬ್ಬರೂ ಅತ್ತ ತಿರುಗಿ ನೋಡಿಲ್ಲ. ಅಂತಲ್ಲಾ ಹೇಳಿ ದರ್ಶನ್ ಯಶ್ ಅವರ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಒಟ್ಟಾರೆ ಸ್ಯಾಂಡಲ್ ವುಡ್ ಸ್ಟಾರ್ಸ್ ಗಳು ಸುಮಕ್ಕಾ ಪರ ಪ್ರಚಾರ ವನ್ನು ಮುಂದುವರೆಸುತ್ತಾರೋ ಅಥವಾ ಇಲ್ಲಿಗೆ ಕೈ ಬಿಡ್ತಾರೋ ಗೊತ್ತಿಲ್ಲ…

Edited By

Manjula M

Reported By

Manjula M

Comments