ಬಿಗ್ ಬ್ರೇಕಿಂಗ್: ನಿಖಿಲ್ ನಾಮಪತ್ರ ಸಲ್ಲಿಕೆ ದಿಢೀರ್ ರದ್ದು..! ಕಾರಣ ಏನ್ ಗೊತ್ತಾ?

21 Mar 2019 1:25 PM | Politics
8142 Report

ಮಂಡ್ಯ ಲೋಕಸಭಾ ಅಖಾಡ ದಿನದಿಂಧ ದಿನಕ್ಕೆ ರಂಗೇರುತ್ತಿದೆ. ಸುಮಲತಾ ಮತ್ತು ನಿಖಿಲ್ ಮಧ್ಯೆ ಪ್ರಬಲ ಪೈಪೋಟಿ ಏರ್ಪಟ್ಟಿತ್ತು… ಇಂದು ನಿಖಿಲ್ ಕುಮಾರಸ್ವಾಮಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟ ಅಭ್ಯರ್ಥಿಯಾಗಿ ನಾಮಿನೇಷನ್ ಮಾಡಬೇಕಿತ್ತು. ಆದರೆ ಕೆಲ ಕಾರಣಗಳಿಂದಾಗಿ ನಿಖಿಲ್ ಅವರ ನಾಮಪತ್ರ ಸಲ್ಲಿಸುವುದು 25ರಂದು ಮುಂದಾಕ್ಕೆ ಹೋಗಿದೆ

ಯಾವಾಗಲೂ ಜ್ಯೋತಿಷಿಗಳ  ಮೊರೆ ಹೋಗುವ ಗೌಡರ ಕುಟುಂಬ ಇದೀಗ ಮತ್ತೊಂದು ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಜ್ಯೋತಿಷಿಗಳ ಸಲಹೆಯಂತೆ ಸಮಯ ನಿಗದಿಪಡಿಸಲಾಗಿದ್ದು, ಗುರುವಾರ ನಾಮಪತ್ರ ಸಲ್ಲಿಸಿದರೆ ಗುರುಬಲ ಕೂಡಿಬರಲಿದೆ ಅನ್ನೋ ನಂಬಿಕೆಯಿಂದಾಗಿ ಇಂದು ನಾಮಿನೇಷನ್ ಮಾಡಲು ನಿಖಿಲ್ ಮುಂದಾಗಿದ್ದರು, ಆದರೆ ಈಗ ಇದ್ದಕ್ಕಿದ್ದಂತೆ ನಾಮಪತ್ರ ಸಲ್ಲಿಕೆಯನ್ನು ರದ್ದು ಮಾಡಿದ್ದಾರೆ.ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾರ್ಚ್ 25ರಂದು ನಿಖಿಲ್ ನಾಮಪತ್ರ ಸಲ್ಲಿಸುತ್ತಾರೆ ಎನ್ನಲಾಗಿದೆ.

Edited By

Manjula M

Reported By

Manjula M

Comments