ನಾನು ಒಂಟಿಯಲ್ಲ ಎಂದ ಸುಮಲತಾ..!!  ಹಾಗಾದ್ರೆ ಸುಮಲತಾ ಹಿಂದೆ ಇರುವುದು ಯಾರು..?

18 Mar 2019 12:33 PM | Politics
921 Report

ಲೋಕಸಭಾ ಚುನಾವಣೆಯು ಹತ್ತಿರ ಬರುತ್ತಿದ್ದಂತೆ ಲೋಕ ಸಮರ ಹೆಚ್ಚಾಗುತ್ತಿದೆ.. ಅದರಲ್ಲೂ ಮಂಡ್ಯ ಅಖಾಡದ ರಂಗು ಮಾತ್ರ ಹೆಚ್ಚಾಗುತ್ತಲೆ ಇದೆ.. ಮಂಡ್ಯ ಲೋಕಸಭಾ ಚುನಾವಣೆಯ ಅಖಾಡದಲ್ಲಿ ನಿಖಿಲ್ ಗೆ ಪ್ರತಿಸ್ಪರ್ಧಿಯಾಗಿಸುಮಲತಾ ಅಖಾಡಕ್ಕೆ ಇಳಿಯುತ್ತಿರುವ ಬಾರೀ ಕುತೂಹಲವನ್ನು ಕೆರಳಿಸಿದೆ. ಲೋಕಸಭಾ ಚುನಾವಣೆಯ ಅಖಾಡದಲ್ಲಿ ನಾನು ಒಂಟಿಯಲ್ಲ. ನನ್ನ ಜೊತೆ ಅಭಿಮಾನಿಗಳು ಇದ್ದಾರೆ ಎಂದು ಮಂಡ್ಯ ಲೋಕಸಭಾ ಸ್ಪರ್ಧಿಯಾದ ಸುಮಲತಾ ಅಂಬರೀಷ್‌ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

ಮಂಡ್ಯದ ಲಕ್ಷ್ಮಿಜನಾರ್ದನ ಸ್ವಾಮಿ ದೇವಾಲಯದಲ್ಲಿ ವೈರಮುಡಿ, ರಾಜಮುಡಿಗೆ ಪೂಜೆ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಚುನಾವಣಾ ಸ್ಪರ್ಧೆ ಬಗ್ಗೆ ಜನರ ಅಭಿಪ್ರಾಯವನ್ನು ತಿಳಿಯಲು ನಾನು ಎಂಟು ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಮುಗಿಸಿದ್ದೇನೆ. ಜನರಿಂದ ಉತ್ತಮ ಪ್ರತಿಕ್ರಿಯೆ ನನಗೆ ಸಿಕ್ಕಿದೆ. ಪ್ರವಾಸದ ಸಮಯದಲ್ಲಿ ರೈತರನ್ನು ಭೇಟಿ ಮಾಡಿದ್ದೇನೆ. ಹಲವು ಸಲಹೆಗಳನ್ನು ನೀಡಿದ್ದಾರೆ. ಅದೆಲ್ಲವನ್ನೂ ಮನಸ್ಸಿನಲ್ಲಿ ಇಟ್ಟು ಕೊಂಡಿದ್ದೇನೆ.

ನಾನು ಯಾರನ್ನೂ ಟೀಕೆ ಮಾಡುವುದಿಲ್ಲ. ಹಿರಿಯರಿಗೆ ಗೌರವ ಕೊಡುತ್ತೇನೆ. ಬಿಜೆಪಿ ಬೆಂಬಲ ಕೊಡುವ ಬಗ್ಗೆ ಅಧಿಕೃತವಾಗಿ ಯಾವ ಹೇಳಿಕೆಯನ್ನೂ ನೀಡಿಲ್ಲ.  ಅಂಬಿ ಅಭಿಮಾನಿಗಳು ಮಂಡ್ಯದ ಜನತೆ ಸದಾ ನನ್ನೊಂದಿಗೆ ಇರುತ್ತಾರೆ.. ನಾನು ಯಾವತ್ತು ಒಂಟಿಯಲ್ಲ.. ಅಂಬರೀಶ್ ಜನರನ್ನು ಸಂಪಾದಿಸಿದ್ದಾರೆ.. ಅವರೆಲ್ಲಾ ನನ್ನ ಜೊತೆ ಇದ್ದಾರೆ ಎಂದಿದ್ದಾರೆ.

Edited By

Manjula M

Reported By

Manjula M

Comments