ಕಾಂಗ್ರೆಸ್ಸಿನಿಂದ ಟಿಕೇಟ್ ಕೇಳಿದ ರಹಸ್ಯ ರಿವಿಲ್ ಮಾಡಿದ ರೆಬಲ್ ಪತ್ನಿ..!! 

16 Mar 2019 5:31 PM | Politics
2642 Report

ಲೋಕಸಭಾ ಚುನಾವಣೆಯು ಸಮೀಪಿಸುತ್ತಿದ್ದಂತೆ ಎಲ್ಲಾ ಪಕ್ಷದವರು ಚುನಾವಣೆಯ ಪ್ರಚಾರವನ್ನು ಬಹಳ ಬಿರುಸಿನಿಂದ ಮಾಡುತ್ತಿದ್ದಾರೆ.. ಈ ಮಧ್ಯೆ ಸುಮಲತಾ ನಾನು ಯಾವತ್ತೂ ಕಾಂಗ್ರೆಸ್‌ನಲ್ಲಿ ಇರಲಿಲ್ಲ. ನಾನು ಕಾಂಗ್ರೆಸಿಗಳಲ್ಲ ಅಲ್ಲ ಆ ಪಕ್ಷದಲ್ಲಿ ಇದದ್ದು, ಅಂಬರೀಶ್‌ ಹೀಗಾಗಿ ನಾನು ಆ ಪಕ್ಷದಿಂದ ಟಿಕೇಟ್ ಕೇಳಿದ ಅಂತ ತಿಳಿಸಿದ್ದಾರೆ. ಅವರು ಇಂದು ಕೆ.ಆರ್.ನಗರದಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡುತ್ತ ಸುಮಲತಾ ಈಗಲೂ ಕಾಂಗ್ರೆಸ್‌ನಲ್ಲಿ ಇದ್ದಾರೆ ಎಂದ ಸಿದ್ದರಾಮಯ್ಯ ಅವರ ಮಾತಿಗೆ ಸಂಬಂಧಪಟ್ಟಂತೆ ಮಾಧ್ಯಮದರ ಪ್ರಶ್ನೆಗೆ ಉತ್ತರಿಸಿದ ಸುಮಲತಾ ನಾನು ಯಾವುದೇ ಪಕ್ಷದಲ್ಲೂ ಇರಲಿಲ್ಲ ಎಂದು ಸ್ಪಷ್ಟ ಪಡಿಸಿದರು..

ಅಷ್ಟೆ ಅಲ್ಲದೆ ಇನ್ನು ಮಂಡ್ಯದಲ್ಲಿ 8 ಕ್ಕೆ 8 ಕ್ಷೇತ್ರದಲ್ಲಿ ಅವರೇ ಇದ್ದಾರೆ. ಮೂವರು ಸಚಿವರಿದ್ದಾರೆ. ಎಂಎಲ್‌ಸಿಗಳಿದ್ದಾರೆ, ಸಿಎಂ ಇದ್ದಾರೆ ಆದರೂ ಕೂಡ ನನ್ನ ಬಗ್ಗೆ ಯಾಕೆ ಭಯ ಪಡುತ್ತಿದ್ದಾರೆ ಅಂತ ಪ್ರಶ್ನೆ ಮಾಡಿದರು. ಒಟ್ಟಾರೆ ಪಕ್ಷೇತರವಾಗಿ ನಿಲ್ಲಬೇಕು ಎಂದುಕೊಂಡಿರುವ ಸುಮಲತಾ ಗೆ ಮಂಡ್ಯದ ಜನತೆ ಒಲವು ತೋರಿಸುತ್ತಾರೋ ಗೊತ್ತಿಲ್ಲ..ನಿಖಿಲ್ ಮತ್ತು ಸುಲಮತಾ ಮಧ್ಯೆ ತೀವ್ರ ಪೈಪೋಟಿ ಎದುರಾಗುವುದಂತೂ ಸುಳ್ಳಲ್ಲ.. ಇವರಿಬ್ಬರಲ್ಲಿ ಯಾರು ಗೆದ್ದು ಅಧಿಕಾರದ ಚುಕ್ಕಾಣಿಯನ್ನು ಹಿಡಿಯುತ್ತಾರೋ ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments