ಕಾಂಗ್ರೆಸ್ ಪಕ್ಷದ ಫ್ರಭಾವಿ ನಾಯಕ ಬಿಜೆಪಿಗೆ..!!

15 Mar 2019 3:53 PM | Politics
1991 Report

ರಾಜಕೀಯ ಅಂದ ಮೇಲೆ ಪಕ್ಷದಿಂದ ಪಕ್ಷಕ್ಕೆ ಹಾರುವುದು ಕಾಮನ್.. ಇದೀಗ ಪಶ್ಚಿಮ ಬಂಗಾಳದ ಆಡಳಿರಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.. ಈಗಾಗಲೇ ಲೋಕಸಭಾ ಚುನಾವಣೆಗೆ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿವೆ.. ಈ ಸಂದರ್ಭದಲ್ಲಿಯೇ ಪ್ರಭಾವಿ ನಾಯಕರು ಪಕ್ಷವನ್ನು ತೊರೆಯುತ್ತಿದ್ದಾರೆ.  ಇದೀಗ ಅರ್ಜುನ್‌ ಸಿಂಗ್‌ ಬಿಜೆಪಿ ಪಕ್ಷವನ್ನು ಸೇರಿಕೊಂಡಿದ್ದಾರೆ..,

ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿಯೇ ಅರ್ಜುನ್‌ ಸಿಂಗ್‌, ಲೋಕಸಭಾ ಚುನಾವಣೆಯಲ್ಲಿ ಟಿಎಂಸಿ ನಾಯಕ ದಿನೇಶ್‌ ತ್ರಿವೇದಿ ವಿರುದ್ಧ ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.ಬಿಜೆಪಿ ಸೇರ್ಪಡೆ ಬಳಿಕ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ ಅರ್ಜುನ್‌ ಸಿಂಗ್‌, 'ಸಿಎಂ ಮಮತಾಗಾಗಿ ನಾನು 30 ವರ್ಷಗಳನ್ನು ತ್ಯಾಗ ಮಾಡಿದ್ದೇನೆ. ಆದರೆ, ಅವರು ಪುಲ್ವಾಮಾ ದಾಳಿ ಕುರಿತು ನೀಡಿದ ಹೇಳಿಕೆಯಿಂದ ನಾನು ದಿಗ್ಭ್ರಮೆಯಾಗಿದ್ದೆ.

ಇನ್ನು ವಾಯುಪಡೆ ಸರ್ಜಿಕಲ್‌ ದಾಳಿ ನಡೆಸಿದಾಗಲೂ, ಉಗ್ರರ ಶವಗಳನ್ನು ತೋರಿಸುವಂತೆ ಪಟ್ಟು ಹಿಡಿದಿದ್ದರು. ದೇಶದ ಹಿತಾಸಕ್ತಿಯನ್ನೇ ಪ್ರಶ್ನೆ ಮಾಡುವಂಥ ನಾಯಕರು ಮತದಾರರಿಗಾಗಿ ಒಳ್ಳೆ ಕೆಲಸ ಮಾಡಲು ಹೇಗೆ ಸಾಧ್ಯ,' ಎಂದು ಕಿಡಿಕಾರಿದರು.ಒಟ್ಟಾರೆಯಾಗಿ ರಾಜಕೀಯದಲ್ಲಿ ಯಾವೆಲ್ಲಾ ರೀತಿಯ ಬದಲಾವಣೆಗಳು ಯಾವ ರೀತಿ ಆಗುತ್ತವೆ ಎಂಬುದು ಯಾರಿಗೂ ಕೂಡ ತಿಳಿದಿರುವುದಿಲ್ಲ..

Edited By

Manjula M

Reported By

Manjula M

Comments