ಸುಮಲತಾಗೆ ಬಿಗ್ ಶಾಕ್ ನೀಡಿದ ಯಶ್ :  ಪ್ರಚಾರಕ್ಕೆ ಬರಲ್ವಂತೆ, ಕಾರಣ ಗೊತ್ತಾ…?!!!

14 Mar 2019 9:48 AM | Politics
16166 Report

ಲೋಕಸಭೆ ಚುನಾವಣೆಯ ಕಾವು ಮಂಡ್ಯ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಸಾರ್ವಜನಿಕರಲ್ಲಿ ಮತ್ತಷ್ಟು ಕುತೂಹಲ ಕೆರಳಿಸಿದೆ. ನಟಿ ಸುಮಲತಾ ಅವರು ಕಾಂಗ್ರೆಸ್ ಟಿಕೆಟ್ ಸಿಗದೇ ಇದ್ರೂ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಆದ್ರೂ ಈ ಬಾರಿ ಚುನಾವಣೆಗೆ ನಿಲ್ತೇನೆ ಎಂದು ಪಣ ತೊಟ್ಟಿದ್ದಾರೆ. ಅವರಿಗೆ ನೆರವು ನೀಡಲು ಸ್ಯಾಂಡಲ್’ವುಡ್’ನ ಸ್ಟಾರ್ ಗಳು ಸಾಥ್ ಕೊಡುತ್ತಿದ್ದಾರೆ ಎಂಬ ಮಾಹಿತಿಯೂ ಹರಿದಾಡಿತ್ತು. ದರ್ಶನ್ ಬಿಟ್ಟರೇ ಯಾರು ಅಧಿಕೃತವಾಗಿ ನಾನು ಸುಮಲತಾ ಪರ ಕ್ಯಾಂಪೇನ್ ಮಾಡ್ತೀನಿ ಅಂತಾ ಹೇಳಿರಲಿಲ್ಲ.

ಆದರೆ ಸುಮಲತಾ ಮಾತ್ರ ಯಶ್ ಮತ್ತು ದರ್ಶನ್ ನನ್ನೊಂದಿಗಿದ್ದಾರೆ, ನನಗೆ ಅವರೇ ದೊಡ್ಡ ಶಕ್ತಿ ಎಂದಿದ್ದರು. ಆದರೆ ಇದೀಗ ಮಾಹಿತಿಯೊಂದು ಹರಿದಾಡುತ್ತಿದೆ. ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಈ ನಡುವೆ ಯಶ್ ಅವರು ಮಾಡಿರುವ ಮೆಸೇಜ್ ವೊಂದು ಸುಮಲತಾಗೆ ಕೋಲಾಹಲ ಎಬ್ಬಿಸಿದೆ. ರಾಕಿಂಗ್ ಸ್ಟಾರ್ ಯಶ್ ಚುನಾವಣಾ ಪ್ರಚಾರದಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ವಾಸ್ತವವಾಗಿ ಒಕ್ಕಲಿಗ ಸಮುದಾಯೇ ಮಂಡ್ಯದಲ್ಲಿ ಹೆಚ್ಚಾಗಿ ಇರುವುದರಿಂದ  ಸುಮಲತಾ ಪರ ಪ್ರಚಾರ ಮಾಡಿದ್ರೆ ಖಂಡಿತಾ ಅವರ ವಿರೋಧ ಕಟ್ಟಿಕೊಳ್ಳುತ್ತಾರೆ ಮತ್ತು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕುಟುಂಬವನ್ನು ಎದುರು ಹಾಕಿಕೊಳ್ಳಲು ಯಶ್ ಸಿದ್ದರಿಲ್ಲ. ಆದ್ದರಿಂದಲೇ ಕ್ಷಮಿಸಿ ನಾನು ಚುನಾವಣಾ ಪ್ರಚಾರಕ್ಕೆ ಬರೋಲ್ಲ ಎಂದು ಯಶ್ ಕೈ ಚೆಲ್ಲಿದ್ದಾರೆ ಎನ್ನಲಾಗಿದೆ.ಇತ್ತೀಚೆಗೆ ಯಶ್ ಮಗಳಿಗೆ ಅಂಬಿ ಕುಟುಂಬದಿಂದ ಪ್ರೀತಿಯ ತೊಟ್ಟಿಲನ್ನು ಉಡುಗೊರೆಯಾಗಿ ಕೊಡಲಾಗಿತ್ತು.

ಅದೇನೆ ಇರಲಿ. ಅಷ್ಟೇ ಅಲ್ಲದೇ ಯಶ್ ಇತ್ತೀಚಿಗೆ ಸುಮಲತಾ ಅವರನ್ನು ಭೇಟಿಯಾಗಿ ಸುಮಾರು ನಾಲ್ಕು ಗಂಟೆಗಳ ಕಾಲ ಭೇಟಿ ಮಾಡಿ ಮಾತು-ಕತೆ ನಡೆಸಿದ್ದರು. ಆದರೆ ಆ ಮಾತು-ಕತೆಯಲ್ಲಿ  ಏನು ಮಾತನಾಡಿದ್ದಾರೆಂಬು ಗೊತ್ತಿಲ್ಲ, ಆದರೆ ಕ್ಯಾಂಪೇನ್ ರೂಪು ರೇಷೆ ಸಿದ್ಧ ಮಾಡುತ್ತಿದ್ದಾರೆ ಎಂಬ ಮಾಹಿತಿ ಮಾತ್ರ ಇತ್ತು. ಆದರೆ ಇದೀಗ ಯಶ್ ಹೇಳಿಕೆ ಸುಮಲತಾ ಅಭಿಮಾನಿಗಳಿಗೆ ದೊಡ್ಡ ಶಾಕ್ ತಂದಿದೆ. ತಮ್ಮ ಪ್ರಚಾರಕ್ಕೆ ಬರುವುದಿಲ್ಲವೆಂಬ ಸುದ್ದಿ ಕೇಳಿ ಸುಮಲತಾ ಶಾಕ್ ಆಗಿದ್ದಾರಂತೆ. ಆದರೆ ಯಶ್ ಸುಮಲತಾ ಪರ ಪ್ರಚಾರಕ್ಕೆ ಬರಲ್ಲ ಎಂಬ ಸುದ್ದಿ ಅಧಿಕೃತವಾಗಿ ತಿಳಿದು ಬಂದಿಲ್ಲ. ಸುಮಲತಾ ಮತ್ತು ನಿಖಿಲ್ ಇಬ್ಬರು ಚಿತ್ರರಂಗದಿಂದ ಬಂದವರೇ. ಆದರೂ ಯಾವ ಸ್ಟಾರ್ ಯಾವ ಸಮಯದಲ್ಲಿ ಯಾರ ಕೈ ಹಿಡಿಯುತ್ತಾರೆಂಬುದು ದೊಡ್ಡ ಅನುಮಾನ. ಹೇಳಿ ಕೇಳಿ ಮೊದಲಿನಿಂದಲೂ ಯಶ್ ಮತ್ತು ದರ್ಶನ್ ಅವರನ್ನು ಸುಮಲತಾಗೆ ಆನೆಬಲ ಎನ್ನುತ್ತಿದ್ದರು. ಆದರೆ ಯಶ್ ಅವರ ಈ ನಿರ್ಧಾರ ನಿಜಕ್ಕೂ ದೊಡ್ಡ ಅನುಮಾನವೇ ಸೃಷ್ಟಿಸಿದೆ. ಇದನ್ನು ಅಧಿಕೃತವಾಗಿ ಯಶ್ ಅವರೇ ತಿಳಿಸಬೇಕಾಗಿದೆ.

Edited By

Manjula M

Reported By

Manjula M

Comments