'ಗೋ ಬ್ಯಾಕ್ ಡಿಕೆಶಿ' ಹೆಸರಲ್ಲಿ ಹೋರಾಟ..!!  ಹೀಗೆ ಹೇಳುತ್ತಿರುವುದು ಯಾರ್  ಗೊತ್ತಾ..?

12 Mar 2019 5:14 PM | Politics
288 Report

ಮಂಡ್ಯ ಲೋಕಸಭಾ ಚುನಾವಣೆಯ ಅಖಾಡದ ಕಾವು ಮತ್ತಷ್ಟು ಹೆಚ್ಚಾಗುತ್ತಿದೆ. ಇದೆಲ್ಲದರ ನಡುವೆ ದೋಸ್ತಿ ಸರ್ಕಾರದ ಉಳಿವಿಗಾಗಿ ಶ್ರಮಿಸಿರುವ ಸಚಿವ ಡಿ ಕೆ ಶಿವಕುಮಾರ್ ವಿರುದ್ದ ಮಂಡ್ಯ ಕಾಂಗ್ರೆಸ್ ನಾಯಕರು ಸಿಟ್ಟಾಗಿದ್ದಾರೆ.. ಕಾಂಗ್ರೆಸ್ ಪಕ್ಷದ ಸಂಘಟನೆಗೆ ಬಂದರೆ ಸ್ವಾಗತ ಮಾಡುತ್ತೇವೆ... ಆದರೆ ಜೆಡಿಎಸ್ ಏಜೆಂಟಾಗಿ ಬಂದರೆ ಗೋ ಬ್ಯಾಕ್ ಡಿಕೆಶಿ ಹೆಸರಲ್ಲಿ ಹೋರಾಟ ಮಾಡುವುದಾಗಿ ಕಾಂಗ್ರೆಸ್ ನಾಯಕರು ಎಚ್ಚರಿಕೆ ನೀಡಿದ್ದಾರೆ..

ಮಾಧ್ಯಮಗಳ ಜೊತೆ ಮಾತನಾಡಿದ ಕಾಂಗ್ರೆಸ್ ಮುಖಂಡ, ನಗರಸಭೆ ಮಾಜಿ ಸದಸ್ಯ ಅನಿಲ್ ಕುಮಾರ್ ಕಾಂಗ್ರೆಸ್ ಕಾರ್ಯಕರ್ತರ ಕಷ್ಟ, ಸುಖ ಕೇಳೋದಕ್ಕೆ ನೀವು ಸಚಿವರಾಗಿದ್ದೀರಿ. ಮಂಡ್ಯದಲ್ಲಿ ಯಾವೊಬ್ಬ ಕಾಂಗ್ರೆಸ್ ಜನಪ್ರತಿನಿಧಿ ಇಲ್ಲ. ನಮ್ಮ ಕಷ್ಟ ಸುಖ ಕೇಳೋದಕ್ಕೆ ಅಂತಾಲೇ ಸುಮಲತಾ ಗೆಲ್ಲಿಸಿಕೊಂಡು ಬರ್ತೀವಿ ಅಂತ ತಿಳಿಸಿದ್ದಾರೆ… ಕಾಂಗ್ರೆಸ್’ನಿಂದ ಸುಮಲತಾಗೆ ಟಿಕೆಟ್ ಕೊಡದಿದ್ದರೂ ಪಕ್ಷೇತರವಾಗಿ ನಿಲ್ಲಿಸಿ ಗೆಲ್ಲಿಸುತ್ತೇವೆ. ನಾಯಕರಿಗೆ ಪಕ್ಷದಿಂದ ಅಮಾನತು, ನೋಟಿಸ್ ಕೊಡುವುದಾಗಿ ಬೆದರಿಕೆ ಹಾಕಿದ್ರೆ ಸುಮ್ಮನಿರಲ್ಲ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಒಟ್ಟಾರೆಯಾಗಿ ಕಾಂಗ್ರೆಸ್ ನಾಯಕರಲ್ಲಿ ಭಿನ್ನಮತ ಸ್ಫೋಟವಾಗುವುದು ಖಂಡಿತಾ… ರಾಜ್ಯ ರಾಜಕೀಯ ವಲಯದಲ್ಲಿ ಇನ್ನು ಯಾವೆಲ್ಲಾ ರೀತಿಯ ತೊಂದರೆಗಳು ಉದ್ಭವವಾಗುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments