ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದ ಸುಮಲತ ಅಂಬರೀಶ್ ಅವರ ಪೇಸ್ ಬುಕ್ ಪೋಸ್ಟ್...! ಅಂತದೇನಿದೆ ಆ ಪೋಸ್ಟ್’ನಲ್ಲಿ..!!

12 Mar 2019 1:12 PM | Politics
1274 Report

ರಾಜಕೀಯ ವಲಯದಲ್ಲಿ ಇತ್ತಿಚಿಗೆ ಸಾಕಷ್ಟು ಬೆಳವಣಿಗೆಗಳು ಆಗುತ್ತಿವೆ… ಮಂಡ್ಯ ಲೋಕಸಭಾ ಅಖಾಡ ಮಾತ್ರ ದಿನದಿಂದ ದಿನಕ್ಕೆ ರಂಗೇರುತ್ತಿದೆ.. ಮಂಡ್ಯ ಅಖಾಡದಿಂದ ಸುಮಲತಾ ಕಣಕ್ಕಿಳಿಯುವುದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.. ನಿಖಿಲ್ ಗೆ ಟಿಕೇಟ್ ಕೊಡುತ್ತಾರೋ ಅಥವಾ ಸುಮಲತಾ ಗೆ ಕೊಡುತ್ತಾರೋ ಎಂಬುದರ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ… ಮಂಡ್ಯ ಲೋಕಸಭಾ ಚುನಾವಣೆಯ ಅಖಾಡ ಮಾತ್ರ ದಿನದಿಂದ ದಿನಕ್ಕೆ ರಂಗೇರುತ್ತಿದೆ…

ನೆನ್ನೆಯಷ್ಟೆ ಸಾಮಾಜಿಕ ಜಾಲತಾಣಗಳ ಖಾತೆಯನ್ನು ತೆರೆದಿರುವ ಸುಮಲತಾ ಪ್ರಚಾರವನ್ನು ಶುರು ಮಾಡಿದ್ದಾರೆ.. ಇದೆಲ್ಲದರ ನಡುವೆ ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ಸಿಗದೇ ಇರುವ ಬಗ್ಗೆ ಸ್ಪಷ್ಟಮಾಹಿತಿ ಸಿಕ್ಕ ಬಳಿಕ ಕೂಡ ಸುಮಲತ ಅವರು ಮಂಡ್ಯದಲ್ಲಿ ತಮ್ಮ ಪರ ಚುನಾವಣಾ ಪ್ರಚಾರವನ್ನು ನಡೆಸುತ್ತಿದ್ದಾರೆ. ಇನ್ನು ತಮ್ಮ ರಾಜಕೀಯ ಚಟುವುಟಿಕೆಗಳಿಗೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಷಯಗಳಿಗೆ ಸಂಬಂಧಪಟ್ಟಂತೆ ಸುಮಲತ ಅವರು ತಮ್ಮ ಅಧಿಕೃತ ಫೇಸ್ ಬುಕ್‌ ಖಾತೆಯಿಂದ ಸ್ಪಷ್ಟನೆಯನ್ನು ನೀಡಿದ್ದಾರೆ..

ಆತ್ಮೀಯ /ಮಾನ್ಯ
ಮಂಡ್ಯ ಜನರಲ್ಲಿ ಒಂದು ಮನವಿ. ಮಂಡ್ಯ ಜನರ ಋಣ ತೀರಿಸಲು ನಾನು ಬದ್ದಳಾಗಿರುವೆ. ಮಂಡ್ಯ ಜನರನ್ನು ದಿಕ್ಕು ತಪ್ಪಿಸಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕುತಂತ್ರ ಮಾಡುತ್ತಿದ್ದಾರೆ. ಇನ್ನು ಮುಂದೆ ಯಾವುದೇ ಊಹಾಪೋಹದ ಗಾಳಿ ಸುದ್ದಿಗಳಿಗೆ ಕಿವಿಗೊಡಬೇಡಿ. ನಿಮ್ಮ ಬೆಂಬಲ ಮತ್ತು ಆಶೀರ್ವಾದ ಸದಾ ನನ್ನೊಂದಿಗಿರಲಿ ಎಂದು ಈ ಮೂಲಕ ತಮ್ಮಲ್ಲಿ ನಾನು ಕೇಳಿಕೊಳ್ಳುತ್ತಿದ್ದೇನೆ. ನಿಮ್ಮ ಪ್ರೀತಿ ,ಕಾಳಜಿ .ಒತ್ತಾಸೆ ಬೆಂಬಲಗಳೇ ನಮಗೆ ಶ್ರೀರಕ್ಷೆ...ಅಂಬಿ ಅಮರ

ಇಂತಿ ನಿಮ್ಮ
ಸುಮಲತಾ ಅಂಬರೀಶ್

ಎಂಬ ಪೋಸ್ಟ್ಅನ್ನು ಮಾಡಿದ್ದಾರೆ.. ಇದರಿಂದ ಅಂಬಿ ಅಭಿಮಾನಿಗಳು ಸಂತಸವನ್ನು ಪಟ್ಟಿದ್ದಾರೆ… ಪ್ರಚಾರಕ್ಕೆ ಬೇಕಾದ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ..

Edited By

Manjula M

Reported By

Manjula M

Comments