ಬಿಜೆಪಿ ಅಭ್ಯರ್ಥಿಯ ಲೋಕಸಭಾ ಅಖಾಡ ಫಿಕ್ಸ್..!! ಗೌಡರ ಮೊಮ್ಮಗನಿಗೆ ಟಫ್ ಫೈಟ್ ಕೊಡ್ತಾರ ‘ಸಿದ್ದು’ ಆಪ್ತ…!?

11 Mar 2019 12:54 PM | Politics
10154 Report

ಮಂಡ್ಯ ಅಖಾಡದ ಕಾವು ಹೇಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆಯೋ ಅದೇ ರೀತಿ ಇನ್ನೂ ಹಾಸನ ಕ್ಷೇತ್ರ ಕೂಡ ರಂಗೇರುತ್ತಿದೆ..ಹಾಸನದಲ್ಲಿ ಈಗಾಗಲೇ ಜೆಡಿಎಸ್ ನಿಂದ ಪ್ರಜ್ವಲ್ ರೇವಣ್ಣ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ…ಹಾಗಾದ್ರೆ ಪ್ರಜ್ವಲ್ ರೇವಣ್ಣನಿಗೆ ಟಫ್ ಪೈಟ್ ಕೊಡೋ ಬಿಜೆಪಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಕೂಡ ಮೂಡಿದೆ.. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಭಾರಿ ಪೈಪೋಟಿ ಏರ್ಪಡುವ ಸಾಧ್ಯತೆ ಹೆಚ್ಚಾಗಿದೆ..

ಈ ನಡುವೆ ಹಾಸನದಲ್ಲಿ ದೇವೇಗೌಡರ ಕುಟುಂಬ ರಾಜಕಾರಣವನ್ನು ವಿರೋಧಿಸಿಕೊಂಡು ಬಂದಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಮಿತ್ರ, ಮಾಜಿ ಸಚಿವ ಎ.ಮಂಜು ಅವರು ಈ ಬಾರಿ ಲೋಕಸಭಾ ಚುನಾವಣೆಗೆ ಹಾಸನದಿಂದ ಬಿಜೆಪಿ ಟಿಕೇಟ್ ಪಡೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ..ಹಾಸನದ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ  ಜೆಡಿಎಸ್​ನಿಂದ ಈ ಬಾರಿ ತಮ್ಮ ಮೊಮ್ಮಗ ಹಾಗೂ ರೇವಣ್ಣ ಅವರ ಪುತ್ರ ಪ್ರಜ್ವಲ್​ ರೇವಣ್ಣ ಸ್ಪರ್ಧಿಸುತ್ತಾರೆ ಎಂದು ಜೆಡಿಎಸ್​ ವರಿಷ್ಠ ಎಚ್​.ಡಿ. ದೇವೇಗೌಡ ಈಗಾಗಲೆ ತಿಳಿಸಿದ್ದಾರೆ..

ಎ.ಮಂಜು ಅವರು ಬಿಜೆಪಿಯಿಂದ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗಿದೆ. ಕಳೆದ ಬಾರಿ ಜೆಡಿಎಸ್​ನಿಂದ ಮಾಜಿ ಪ್ರಧಾನಿ ದೇವೇಗೌಡ ಸ್ಪರ್ಧಿಸಿದ್ದರು. ಇವರ ವಿರುದ್ಧ ಕಾಂಗ್ರೆಸ್​ನಿಂದ ಎ. ಮಂಜು ಕಣಕ್ಕಿಳಿದಿದ್ದರು. ಆಗ ಅವರು 1 ಲಕ್ಷ ಮತಗಳ ಅಂತರದಿಂದ ಸೋಲು ಕಂಡಿದ್ದರು.ಇದೀಗ ಪ್ರಜ್ವಲ್ ವಿರುದ್ದ ನಿಂತು ಗೆಲುವನ್ನು ಸಾಧಿಸುತ್ತಾರ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments