'ದೋಸ್ತಿ'ಗಳಿಗೆ ಬಿಗ್ ಶಾಕ್: ಸುಮಲತಾ ಪರ ಬ್ಯಾಟಿಂಗ್ ಬೀಸಿದ ‘ಕೈ’ ಕಾರ್ಯಕರ್ತರು..!!

11 Mar 2019 9:12 AM | Politics
333 Report

ಲೋಕಸಭಾ ಚುನಾವಣೆಗೆ ಈಗಾಗಲೇ ಮೂಹೂರ್ತ ಫಿಕ್ಸ್ ಆಗಿದ್ದು,  ಮಂಡ್ಯ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ… ಮಂಡ್ಯ ಇದೀಗ ಲೋಕಸಭೆಯ ಕೇಂದ್ರ ಬಿಂದುವಾಗಿ ಬಿಟ್ಟಿದೆ.. ಎಲ್ಲರ ಚಿತ್ತ ಮಂಡ್ಯ ಕ್ಷೇತ್ರದತ್ತ ಎನ್ನುವ ರೀತಿ ಆಗಿದೆ.. ದೋಸ್ತಿ ಸರ್ಕಾರಕ್ಕೆ ಒಂದು ರೀತಿಯ ಸಂಕಷ್ಟ ಎದುರಾಗಿ ಬಿಟ್ಟಿದೆ… ಮೈತ್ರಿ ಮಾಡಿಕೊಂಡಿರುವುದರಿಂದ ಒಬ್ಬ ಅಭ್ಯರ್ಥಿ ಮಾತ್ರ ನಿಂತುಕೊಳ್ಳಲು ಅವಕಾಶವಿರುವುದರಿಂದ ಅದು ಕಾಂಗ್ರೆಸ್’ನಿಂದ ಸುಮಲತಾ ಅವರೋ ಅಥವಾ ಜೆಡಿಎಸ್ ನಿಂದ ನಿಖಿಲ್ ಅವರೋ ಎಂಬುದೇ ಇನ್ನೂ ಸ್ಪಷ್ಟವಾಗಿಲ್ಲ…

ಈಗಾಗಲೇ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಡಲಾಗಿದೆ..ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕಣಕ್ಕಿಳಿಯಲಿದ್ದಾರೆ.. ಸುಮಲತಾ ಅಂಬರೀಶ್ ಕೂಡ ಕಾಂಗ್ರೆಸ್ ಟಿಕೆಟ್ ಗಾಗಿ ಕಾಯುತಿದ್ದು, ಟಿಕೆಟ್ ಸಿಗದಿದ್ದರೆ ಪಕ್ಷೇತರರಾಗಿ ಕಣಕ್ಕಿಳಿಯುವುದಾಗಿ ಈಗಾಗಲೇ ಘೋಷಿಸಿ, ಪ್ರಚಾರವನ್ನೂ ಕೂಡ ನಡೆಸುತ್ತಿದ್ದಾರೆ.. ಚಿತ್ರರಂಗದ ಕೆಲವು ಸ್ಟಾರ್ ನಟರು ಸುಮಲತಾ ಪರ ಕ್ಯಾಂಪೇನ್ ಮಾಡುತ್ತಿದ್ದಾರೆ. ಸುಮಲತಾ ಗೆ ಕೇವಲ ಸ್ಟಾರ್ಗಳು ಅಥವಾ ಅಂಬಿ ಅಭಿಮಾನಿಗಳು ಮಾತ್ರ ಬೆಂಬಲ ನೀಡುತ್ತಿಲ್ಲ… ಅವರಿಗೆ ಕಾಂಗ್ರೆಸ್ ಕಾರ್ಯಕರ್ತರಿಂದಲೇ ಕೂಡ ಬೆಂಬಲ ಸಿಗುತ್ತಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಗೋಚರವಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಸಚಿವ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಮಂಡ್ಯ ಜಿಲ್ಲೆ ಕಾಂಗ್ರೆಸ್ ಮುಖಂಡರ ಸಭೆ ನಡೆಸಲಾಗಿದೆ. ಆದರೆ, ಈ ಸಭೆಗೆ ಕಾಂಗ್ರೆಸ್ ಮುಖಂಡರಾದ ಮಾಜಿ ಸಚಿವ ಚೆಲುವರಾಯಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ನರೇಂದ್ರಸ್ವಾಮಿ, ಗಾಣಿಗ ರವಿ, ಚಂದ್ರಶೇಖರ್ ಮೊದಲಾದವರು ಭಾಗವಹಿಸಿಲ್ಲ ಎನ್ನಲಾಗಿದೆ. ಇದನ್ನೆಲ್ಲಾ ನೋಡುವುದಾದರೆ ಈ ಬಾರಿ ಮಂಡ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿಯುವುದು ಸುಮಲತಾ ನೇ ಎಂಬುದು ಹಲವರ ಅಭಿಪ್ರಾಯವಾಗಿದೆ.

Edited By

Manjula M

Reported By

Manjula M

Comments