ಸುಮಲತಾಗೆ ಪಕ್ಕಾ ಆಯ್ತ ಮಂಡ್ಯ ಲೋಕಸಭಾ `ಕೈ'ಟಿಕೆಟ್..!? ಈ ಬಗ್ಗೆ ಸುಮಲತಾ ಹೇಳಿದ್ದೇನು..?

09 Mar 2019 8:40 AM | Politics
5690 Report

ಮುಂಬರುವ ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ ಹೊರತು ಕಡಿಮೆಯಾಗಿಲ್ಲ… ಅದರಲ್ಲೂ ಮಂಡ್ಯ ಲೋಕಸಭಾ ಅಖಾಡದತ್ತ ಎಲ್ಲರ ಚಿತ್ತವಿದೆ… ಮಂಡ್ಯ ಅಖಾಡದ ಅಭ್ಯರ್ಥಿಯ ವಿರುದ್ದ ಸಾಕಷ್ಟು ಮಾತುಗಳು ಕೇಳಿ ಬರುತ್ತಿವೆ… ಸುಮಲತಾ ಗೆ ಟಿಕೇಟ್ ಕೊಡಬೇಕೋ ಅಥವಾ ನಿಖಿಲ್ ಗೆ ಟಿಕೆಟ್ ಕೊಡಬೇಕೋ ಎಂಬುದೆ ದೊಡ್ಡ ಪ್ರಶ್ನೆಯಾಗಿ ಬಿಟ್ಟಿದೆ.. ಹಾಗಾಗಿ ಮಂಡ್ಯ ಜನತೆಯ ಬಹು ಜನರ ಒಲವು ಸುಮಲತಾ ಮೇಲಿದೆ ಎನ್ನಲಾಗುತ್ತಿದೆ.. ಹಾಗಾಗಿ ಜೆಡಿಎಸ್ ಗೆ ತಲೆ ನೋವಾಗಿ ಪರಿಣಮಿಸಿದೆ ಎನ್ನಲಾಗುತ್ತಿದೆ..

ಸುಮಲತಾ ಅಂಬರೀಶ್ ಅವರು ಹೇಳಿರುವ ಪ್ರಕಾರ ಕಾಂಗ್ರೆಸ್ ಟಿಕೆಟ್ ಗಾಗಿ ನಾನು ಕೊನೆ ಕ್ಷಣದವರೆಗೂ ಕಾಯುತ್ತೇನೆ, ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂದಿದ್ದಾರೆ…ಮಾಧ್ಯಮದವರ ಜೊತೆ ಮಾತನಾಡಿದ ಸುಮಲತಾ ನಾನು ಟಿಕೆಟ್ ವಿಚಾರವಾಗಿ ಯಾರನ್ನೂ ಭೇಟಿ ಮಾಡಿಲ್ಲ. ಒಂದೊಂದೆ ಹೆಜ್ಜೆ ಇಟ್ಟು ರಾಜಕೀಯಕ್ಕೆ ಬರುತ್ತಿದ್ದೇನೆ ಎಂದರು.

ಟಿಕೇಟ್ ವಿಷಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ  ಚರ್ಚೆಯಾಗುತ್ತಿದ್ದು, ಅಭಿಮಾನಿಗಳೇ ವೈಯಕ್ತಿಕ ಟೀಕೆ ಬೇಡ, ಯಾರಿಗೂ ನೋವಾಗುವಂತಹ ಮಾತುಗಳು ಬೇಡ, ಯಾರ ಬಗ್ಗೆಯೂ ಅವಮಾನಕರವಾದ ಮಾತುಗಳನ್ನು ಆಡಬಾರದು ಎಂದು ಮನವಿಯನ್ನು  ಮಾಡಿಕೊಂಡಿದ್ದಾರೆ.. ಕಾಂಗ್ರೆಸ್ ಟಿಕೇಟ್ ಸಿಗುವ ಭರವಸೆಯಲ್ಲಿದ್ದಾರೆ ಸುಮಲತಾ…

Edited By

Kavya shree

Reported By

Manjula M

Comments