ಸುಮಲತಾ ಪಕ್ಷೇತರರಾಗಿ ನಿಂತರೆ ಈ ಬಿಜೆಪಿ ಪ್ರಭಾವಿ ನಾಯಕ ಬೆಂಬಲ ಕೊಡುತ್ತಾರಂತೆ…!?

06 Mar 2019 4:48 PM | Politics
3122 Report

ಮುಂಬರುವ ಲೋಕಸಭಾ ಚುನಾವಣೆಗೆ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ… ಸ್ಪರ್ಧೆ ಮಾಡುವುದಾರೆ ಅದು ಮಂಡ್ಯ ಕ್ಷೇತ್ರದಿಂದಲೇ ಎನ್ನುತ್ತಿದ್ದ ಸುಮಲತಾ ಅವರಿಗೆ ಟಿಕೇಟ್ ಸಿಕ್ಕಿಲ್ಲ…ಈ ಕಾರಣಕ್ಕಾಗಿಯೇ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಎಲ್ಲಾ ಸೂಚನೆಗಳು ಸಿಕ್ಕಿವೆ.. ಈ ನಡುವೆ ಆಪರೇಷನ್ ಕಮಲದ ಮೂಲಕ ಉಮೇಶ್ ಜಾಧವ್ ಅವರನ್ನು ಅಧಿಕೃತವಾಗಿ ಇಂದು ಬಿಜೆಪಿಗೆ ಸೇರಿಸಿಕೊಂಡಿದ್ದಾರೆ..ಆದರೆ ಯಡಿಯೂರಪ್ಪ ಮಾತ್ರ ನಾವು ಯಾವ ಶಾಸಕರಿಗೂ ರಾಜೀನಾಮೆ ನೀಡಿ ಅಂತ ಹೇಳಿಲ್ಲ…ಅವರೇ ಬಿಜೆಪಿಗೆ ಬರುತ್ತಿದ್ದಾರೆ ಎಂದು ಹೇಳಿದರು…

ಕಲಬುರಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆಗಮಿಸಿರುವ ಯಡಿಯೂರಪ್ಪ ಸುದ್ದಿಗಾರರೊಂದಿಗೆ ಮಾತನಾಡಿದರು. ಸುಮಲತಾ ಅಂಬರೀಶ್ ಅವರು ಕಾಂಗ್ರೆಸ್ ನಿಂದ ನಿಲ್ಲುತ್ತಾರೊ, ಜೆ ಡಿ ಎಸ್ ನಿಂದ ಸ್ಪರ್ಧೆ ಮಾಡುತ್ತಾರೋ ಅಥವಾ ಪಕ್ಷೇತರವಾಗಿ ನಿಲ್ಲುತ್ತಾರೊ ಗೊತ್ತಿಲ್ಲ. ಪಕ್ಷೇತರವಾಗಿ ನಿಂತರೆ ಬೆಂಬಲ ಕೊಡುವ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು. ಒಟ್ಟಾರೆಯಾಗಿ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ನಿಂತರೂ ಸಾಕಷ್ಟು ಜನ ಅವರಿಗೆ ಸಾಥ್ ಕೊಡಲು ನಿರ್ಧರಿಸಿದ್ದಾರೆ… ಮಾಜಿ ಸಿಎಂ ಯಡಿಯೂರಪ್ಪ ಕೂಡ ಬೆಂಬಲಿಸುವುದಾಗಿ ತಿಳಿಸಿದ್ದಾರೆ..

Edited By

Manjula M

Reported By

Manjula M

Comments