ಲೋಕಸಭಾ ಚುನಾವಣೆಗಾಗಿ ಸುಮಲತಾ ಅಂಬರೀಶ್ ಪೋಟೋಶೂಟ್..!!?

05 Mar 2019 5:46 PM | Politics
259 Report

ಮುಂಬರುವ ಲೋಕಸಭಾ ಚುನಾವಣೆಗಾಗಿ ಎಲ್ಲಾ ಪಕ್ಷದವರು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.. ಒಂದು ಕಡೆ ಅಭ್ಯರ್ಥಿಗಳ ಆಯ್ಕೆ ಜೋರಾಗಿಯೇ ನಡೆಯುತ್ತಿದೆ… ಮತ್ತೊಂದು ಕಡೆ ಸುಮಲತಾ ಅಂಬರೀಶ್ ದೋಸ್ತಿ ಸರ್ಕಾರಕ್ಕೆ ತಲೆ ನೋವಾಗಿ ಪರಿಣಮಿಸಿದ್ದಾರೆ.. ಸ್ಪರ್ಧಿಸುವುದಾದರೆ ಅದು ಮಂಡ್ಯದಲ್ಲಿಯೇ ಕಾಂಗ್ರೆಸ್ ಪಕ್ಷದಿಂದ ಎನ್ನುತ್ತಿದ್ದಾರೆ.. ಮಂಡ್ಯ ಅಖಾಡಕ್ಕೆ ಈಗಾಗಲೇ ನಿಖಿಲ್ ಎಂಬುದು ಬಹುತೇಕ ಖಚಿತವಾಗಿದೆ… ಆದರೆ ಸುಮಲತಾ ಅಂಬರೀಶ್ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ.. ಟಿಕೇಟ್ ಕೊಟ್ಟರೂ ಸರಿ ಕೊಡದೆ ಇದ್ದರೂ ಸರಿ.. ಎನ್ನುತ್ತಿದ್ದಾರೆ.. ಈಗಾಗಲೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಆಲೋಚನೆಯಲ್ಲಿದ್ದಾರೆ ಸುಮಲತ…

ಲೋಕಸಭಾ ಚುನಾವಣೆಗೆ ಈಗಿನಿಂದಲೇ ಎಲ್ಲಾ ಪಕ್ಷಗಳು ಭರ್ಜರಿ ಸಿದ್ಧತೆ ನಡೆಸಿವೆ.ಇದರ ನಡುವೆ ರಾಜ್ಯದಲ್ಲೂ ಚುನಾವಣೆ ಕಾವು ಹೆಚ್ಚುತ್ತಲೆ ಇದೆ. ಅದರಲ್ಲೂ ಮಂಡ್ಯ ಲೋಕಸಭಾ ಕ್ಷೇತ್ರ ಮಾತ್ರ ಸುಮಲತ ಅವರಿಂದಾಗಿ ಇಡೀ ರಾಜ್ಯವನ್ನೆ ತಮ್ಮ ಕಡೆಗೆ ಸೆಳೆಯುತ್ತಿದೆ. ಈ ನಡುವೆ ನಟಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಯಾದ ಸುಮಲತಾ ಅಂಬರೀಶ್ ಅವರು ಲೋಕಸಭಾ ಚುನಾವಣೆಗಾಗಿ. ಖಾದಿ ಸೀರೆಯುಟ್ಟು ಫೋಟೋಶೂಟ್ ಮಾಡಿಸಿದ್ದಾರೆ. ಚುನಾವಣಾ ಕೆಲಸಗಳಿಗೆ ಹಾಗೂ ಪ್ರಚಾರಕ್ಕೆ ಅನುಕೂಲವಾಗಲೆಂದು ಸುಮಲತಾ ಈ ಪೋಟೋಶೂಟ್ ನಡೆಸಿದ್ದು ಇದೀಗ ಆ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗೆದ್ದೆ ಗೆಲ್ಲುತ್ತೇನೆ ಎಂಬ ಆತ್ಮವಿಶ್ವಾಸ ಸುಮಲತಾ ಅವರಿಗಿದೆ.. ಹಾಗಾಗಿ ಅವರು ತಮ್ಮ ತಮ್ಮ ಪಾಡಿಗೆ ತಮ್ಮ ಕೆಲಸಗಳನ್ನು ಮಾಡುತ್ತಿದ್ದಾರೆ.

Edited By

Manjula M

Reported By

Manjula M

Comments