'ಕೈ'ಗೆ ಗುಡ್ ಬೈ ಹೇಳಿ ಕಮಲ ಅರಳಿಸಲು ಮುಂದಾದ ಮೂವರು ಶಾಸಕರು..? ಯಾರ್ಯಾರು ಗೊತ್ತಾ..?

05 Mar 2019 12:45 PM | Politics
3413 Report

ಈಗಾಗಲೇ ದೋಸ್ತಿ ಸರ್ಕಾರಕ್ಕೆ ಉಮೇಶ್ ಜಾಧವ್ ರಾಜೀನಾಮೆ ಬಿಗ್ ಶಾಕ್’ನಂತಾಗಿದೆ.. ಇನ್ನೂ ಯಾರ್ಯಾರು ದೋಸ್ತಿ ಸರ್ಕಾರಕ್ಕೆ ಬಿಗ್ ಶಾಕ್ ಕೊಡುತ್ತಾರೆ ಎಂಬ ಗೊಂದಲದಲ್ಲಿದೆ ಸಮ್ಮಿಶ್ರ ಸರ್ಕಾರ… ಚಿಂಚೋಳಿಯ ಶಾಸಕರಾದ ಉಮೇಶ್ ಜಾಧವ್ ರಾಜೀನಾಮೆ ಹಿನ್ನಲೆಯಲ್ಲಿಯೇ ಇದೀಗ ರಮೇಶ್ ಜಾರಕಿಹೊಳಿ ಸೇರಿದಂತೆ ಇನ್ನುಳಿದ ಮೂವರು ಬಂಡಾಯ ಶಾಸಕರೂ ರಾಜೀನಾಮೆ ನೀಡಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ..

ಲೋಕಸಭೆ ಚುನಾವಣೆ ಪ್ರಾರಂಭವಾಗುವ ಮೊದಲೇ ಈ ಬೆಳವಣಿಗೆ ಕಾಂಗ್ರೆಸ್-ಜೆಡಿಎಸ್ ಗೆ ಆತಂಕವನ್ನು ಸೃಷ್ಟಿ ಮಾಡಿದೆ. ಶಾಸಕ ಉಮೇಶ್ ಜಾಧವ್ ಅವರು ಸ್ಪೀಕರ್ ರಮೇಶ್ ಕುಮಾರ್ ಮನೆಗೆ ಭೇಟಿ ನೀಡಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಮಾರ್ಚ್ 6 ರಂದು ಕಲಬುರ್ಗಿಯಲ್ಲಿ ಬಿಜೆಪಿ ಆಯೋಜಿಸಿರುವ ಸಮಾವೇಶದಲ್ಲಿ ಪ್ರಧಾನಿ ಮೋದಿ ಸಮ್ಮುಖದಲ್ಲಿ ಉಮೇಶ್ ಜಾಧವ್ ಅವರು ಬಿಜೆಪಿಗೆ ಹೋಗಲಿದ್ದಾರೆ..  ಕಾಂಗ್ರೆಸ್ ಹಿರಿಯ ನಾಯಕ ಖರ್ಗೆ ವಿರುದ್ಧ ಕಲಬುರ್ಗಿ ಮೀಸಲು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ. ಇನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಬಿ. ನಾಗೇಂದ್ರ, ಮಹೇಶ್ ಕಮಠಳ್ಳಿ ಲೋಕಸಭಾ ಚುನಾವಣೆಗೆ ಮುನ್ನವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಒಟ್ಟಾರೆಯಾಗಿ ಲೋಕಸಭಾ ಚುನಾವಣೆ ಬರುವ ಹೊತ್ತಿಗೆ ಯಾರು ಯಾವ ಪಕ್ಷದಲ್ಲಿ ಇರುತ್ತಾರೆ ಎಂಬುದೆ ದೊಡ್ಡ ಪ್ರಶ್ನೆಯಾಗಿ ಬಿಟ್ಟಿದೆ… ಇದರಿಂದ ದೋಸ್ತಿ ಸರ್ಕಾರಕ್ಕೆ ಇಕ್ಕಟ್ಟಾಗುವುದಂತೂ ಸುಳ್ಳಲ್ಲ..

Edited By

Manjula M

Reported By

Manjula M

Comments