ಹಾಸನದಲ್ಲಿ ಅಖಾಡಕ್ಕಿಳಿಯುವುದು ಪ್ರಜ್ವಲ್  ರೇವಣ್ಣ ಅಲ್ವಂತೆ..!? ಚುನಾವಣಾ ಅಖಾಡದಲ್ಲಿ ಕೇಳಿಬಂತು ಮತ್ತೊಂದು ಅಚ್ಚರಿಯ ಹೆಸರು..?

21 Feb 2019 11:29 AM | Politics
3159 Report

ಈಗಾಗಲೇ ಮುಂಬರುವ ಲೋಕಸಭಾ ಚುನಾವಣೆಗೆ ಹಾಸನ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಅಖಾಡಕ್ಕೆ ಇಳಿಯುತ್ತಾರೆ ಎಂಬುದು ಬಹುತೇಕ ಖಚಿತವಾದ ಮೇಲೆ ಇದೀಗ ಮತ್ತೊಂದು ಹೆಸರು ಕೇಳಿ ಬರುತ್ತಿದೆ.. ರಾಜಕೀಯ ವಲಯದಲ್ಲಿ ಈ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ..  ಹಾಸನ ಲೋಕಸಭಾ ಕ್ಷೇತ್ರದಿಂದ ಡಾ. ಸೂರಜ್ ರೇವಣ್ಣ ಜೆಡಿಎಸ್ ಅಭ್ಯರ್ಥಿಯಾಗುವ ಸಾಧ್ಯತೆಯಿದೆ ಎಂಬುದರ ಬಗ್ಗೆ ರಾಜಕೀಯ ವಲಯದಲ್ಲಿ ಬಾರಿ ಜೋರಾದ ಮಾತುಗಳು ಕೇಳಿ ಬರುತ್ತಿವೆ...  ಡಾ. ಸೂರಜ್ ರೇವಣ್ಣ ಹಾಸನ ಜಿಲ್ಲೆ ಉಸ್ತುವಾರಿ ವಹಿಸಿಕೊಂಡಿದ್ದು, ಪ್ರಜ್ವಲ್‌ ರೇವಣ್ಣ ಪ್ರಭಾವ ಕಡಿಮೆಯಾದ ಹಿನ್ನೆಲೆ ಸೂರಜ್‌ ಇಳಿಸಲು ಜೆಡಿಎಸ್ ಚಿಂತನೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹಾಸನದಲ್ಲಿ ಲೋಕಸಭಾ ಚುನಾವಣೆಗೆ ಸೂರಜ್ ರೇವಣ್ಣ ಸ್ಪರ್ಧೆ ವಿಚಾರ ಮಾತನಾಡಿದ ಸಚಿವ ರೇವಣ್ಣ, ಹಾಸನ ಲೋಕಸಭಾ ಕ್ಷೇತ್ರದಲ್ಲಿ ಸೂರಜ್ ರೇವಣ್ಣ ನಿಲ್ಲಲ್ಲಾ ದೇವೇಗೌಡರೇ ನಿಲ್ಲುತ್ತಾರೆ. ದೇವೇಗೌಡರೇ ನಿಲ್ಲಲ್ಲಿ ಎಂಬುದು ನಮ್ಮ ಮೊದಲ ಆದ್ಯತೆ ಮತ್ತು ನಮ್ಮ ಅಭಿಪ್ರಾಯವಾಗಿದೆ ಎಂದು ರೇವಣ್ಣ ತಿಳಿಸಿದರು.. ಅಷ್ಟೆ ಅಲ್ಲದೆ ಸೀಟು ಹಂಚಿಕೆ ವಿಚಾರದಲ್ಲಿಯೂ ಕೂಡ ರಾಷ್ಟ್ರೀಯ ಅಧ್ಯಕ್ಷರು ಒಪ್ಪಿಕೊಂಡು ಮಾಡಿದ್ರೆ ಓಕೆ ಇಲ್ಲಾಂದ್ರೆ ಫ್ರೆಂಡ್ಲಿಯಾಗಿ ಸ್ಪರ್ಧೆ ಮಾಡ್ತೀವಿ ಎಂದು ರೇವಣ್ಣ ತಿಳಿಸಿದರು...

Edited By

Manjula M

Reported By

Manjula M

Comments

Cancel
Done