ರಾಜಕೀಯಕ್ಕೆ ಮಾತ್ರ ಮಂಡ್ಯ ಬೇಕಾ…? ‘ಪದ್ಮಾವತಿ’ ಮೇಲೆ ಸಿಡಿದೆದ್ದ ಸಕ್ಕರೆ ನಾಡಿನ ಜನತೆ..!!

18 Feb 2019 9:28 AM | Politics
851 Report

ಮಂಡ್ಯದಲ್ಲಿ ಅದ್ಯಾಕೋ ಗೊತ್ತಿಲ್ಲ ಕೆಲವು ತಿಂಗಳಿಂದ ನೀರವ ಮೌನ ಆಗಿಂದಾಗೆ ಆವರಿಸುತ್ತಿದೆ… ಕೆಲವು ತಿಂಗಳ ಹಿಂದಷ್ಟೆ ಮಂಡ್ಯ ಜಿಲ್ಲೆಯಲ್ಲಾದ ಬಸ್ ದುರಂತ, ಅಂಬರೀಶ್ ನಿಧನ, ದೇವಸ್ಥಾನದ ವಿಷಪ್ರಸಾದ, ಮೊನ್ನೆಯಷ್ಟೆ ವೀರ ಯೋಧ ಗುರುವಿನ ಮರಣ ಇವೆಲ್ಲವೂ ಕಣ್ಣು ಮುಚ್ಚು ಬಿಡುವಷ್ಟರಲ್ಲಿ ಆಗಿ ಹೋಯಿತು… ಇದೆಲ್ಲಾದರ ನಡುವೆ ಮಂಡ್ಯ ಜನತೆಯ ಕೋಪ ನೆತ್ತಿಗೇರಿರುವ ಆಗಿದೆ.. ಕಾರಣ ಏನ್ ಗೊತ್ತಾ..? ಹಿರಿಯ ನಟ ರೆಬಲ್ ಸ್ಟಾರ್ ಅಂಬರೀಶ್ ನಿಧನರಾದ ಸಂದರ್ಭದಲ್ಲಿ ಅನಾರೋಗ್ಯದ ನೆಪವೊಡ್ಡಿ ಅಂತಿಮ ದರ್ಶನಕ್ಕೆ ಆಗಮಿಸದೇ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಮಾಜಿ ಸಂಸದೆ ರಮ್ಯಾ ವಿರುದ್ಧ ಮತ್ತೆ ಮಂಡ್ಯ ಜಿಲ್ಲೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ.

ರಾಜಕೀಯ ಮಾಡಲು ಮಂಡ್ಯ ಬೇಕು. ಆದರೆ, ಮಂಡ್ಯ ಜನತೆಯ ಕಷ್ಟ-ಸುಖದಲ್ಲಿ ರಮ್ಯಾ ಭಾಗಿಯಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ.ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮಂಡ್ಯ ಜಿಲ್ಲೆಯ ಯೋಧ ಹೆಚ್. ಗುರು ಹುತಾತ್ಮರಾಗಿದ್ದಾರೆ. ಮಂಡ್ಯದ ಮಾಜಿ ಸಂಸದರಾಗಿರುವ ರಮ್ಯಾ ಯೋಧನ ಕುಟುಂಬದವರಿಗೆ ಸಾಂತ್ವನ ಹೇಳಿಲ್ಲ ಎಂದು ಗುರು ಸ್ನೇಹಿತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಮಂಡ್ಯ ಕ್ಷೇತ್ರವನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ರಮ್ಯಾ ಅವರು ಇಲ್ಲಿನ ಜನ ದುಃಖದಲ್ಲಿದ್ದಾಗ ಬಂದಿಲ್ಲ. ಗುರು ಕುಟುಂಬದವರಿಗೆ ಸಾಂತ್ವನ ಹೇಳಿಲ್ಲ ಎಂದು ದೂರಲಾಗಿದೆ ಎನ್ನಲಾಗಿದೆ. ಒಂದು ವೇಳೆ ರಮ್ಯ ಅಪ್ಪಿ ತಪ್ಪಿಯೂ ಮಂಡ್ಯಗೆ ಕಾಲಿಟ್ಟರೆ ಅಲ್ಲಿನ ಜನತೆ ಅವರನ್ನು ತರಾಟೆಗೆ ತೆಗೆದುಕೊಳ್ಳುವುದಂತು ಗ್ಯಾರೆಂಟಿ… ರಾಜಕೀಯಕ್ಕೆ ಮಾತ್ರ ಮಂಡ್ಯ ಬೇಕು.. ಅವರ ಕಷ್ಟಕ್ಕೆ ಮಂಡ್ಯ ಬೇಡ ಎಂದು ಜನತೆ ಕೆಂಡಾಮಂಡಲವಾಗಿದ್ದಾರೆ..

Edited By

Manjula M

Reported By

Manjula M

Comments