ಜೆಡಿಎಸ್‌ ಪಾಲಾದ ಈ ಆರು ಕ್ಷೇತ್ರಗಳು..!! ಯಾವುವು ಗೊತ್ತಾ..?

15 Feb 2019 9:57 AM | Politics
11205 Report

ಮುಂಬರುವ ಲೋಕಸಭಾ ಚುನಾವಣೆಗೆ ಕ್ಷೇತ್ರಗಳ ಆಯ್ಕೆಯಲ್ಲಿ ಎಲ್ಲ ಪಕ್ಷದವರು ಬ್ಯುಸಿಯಾಗಿದ್ದಾರೆ..ಜೆಡಿಎಸ್‌ ಜೊತೆಗಿನ ಮೈತ್ರಿಯೊಂದಿಗೇ ಲೋಕಸಭೆ ಚುನಾವಣೆ ಎದುರಿಸಲು ಮುಂದಾಗಿರುವ ಕಾಂಗ್ರೆಸ್‌, ರಾಜ್ಯದಲ್ಲಿ ಆರು ಕ್ಷೇತ್ರಗಳನ್ನು ಮಾತ್ರ ಬಿಟ್ಟುಕೊಡಲು ಸಿದ್ದವಿದ್ದಾರೆ ಎಂದು ಹೇಳಲಾಗುತ್ತಿದೆ. ಮಂಡ್ಯ ಮತ್ತು ಹಾಸನಗಳಲ್ಲಿ ಜೆಡಿಎಸ್‌ನ ಹಾಲಿ ಸಂಸದರಿದ್ದಾರೆ. ಲೋಕಸಭಾ ಚುನಾವಣೆಗೆ ಆಪರೇಷನ್ ಕಮಲದ ಮೂಲಕ ಅತೃಪ್ತ ಶಾಸಕರನ್ನು ಸೆಳೆಯಲು ಬಿಜೆಪಿ ಎಷ್ಟೆ ಪ್ರಯತ್ನ ಮಾಡುತ್ತಿದ್ದರು ಯಾವುದು ಕೂಡ ವರ್ಕೌಟ್ ಆಗುವ ರೀತಿಯಲ್ಲಿ ಕಾಣುತ್ತಿಲ್ಲ..

ಇದೀಗ 'ಹಾಸನ, ಶಿವಮೊಗ್ಗ, ಬೆಂಗಳೂರು ಉತ್ತರ ಮತ್ತು ತುಮಕೂರು ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಒಪ್ಪಿರುವ ಪಕ್ಷದ ರಾಜ್ಯ ಮುಖಂಡರು, ಬೀದರ್‌ನಿಂದ ಹಾವೇರಿವರೆಗೆ ಉತ್ತರ ಕರ್ನಾಟಕದ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವಂತೆ ಮಿತ್ರ ಪಕ್ಷವನ್ನು ಕೇಳಬಹುದು. ಇಂದು ವೇಳೆ ನಮ್ಮ ಮಾತಿಗೆ ಒಪ್ಪದಿದ್ದರೆ ಹೇಗಾದ್ರೂ ಮಾಡಿ ಒಪ್ಪಿಸಬೇಕು.. ಎಂದು ವರಿಷ್ಠರಿಗೆ ಸಲಹೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಒಟ್ಟಾರೆಯಾಗಿ ಜೆಡಿಎಸ್ ಗೆ ಆರು ಕ್ಷೇತ್ರಗಳನ್ನು ಬಿಟ್ಟುಕೊಡುವುದಾಗಿ ತಿಳಿಸಿದ್ದಾರೆ.. ಜೆಡಿಎಸ್ ಪಾಲಿಗೆ ಈ ಆರು ಕ್ಷೇತ್ರಗಳು ಹೆಚ್ಚಾಗುತ್ತವೋ ಅಥವಾ ಇನ್ನೂ ಕ್ಷೇತ್ರಗಳು ಬೇಕು ಎಂದು ಬೆಂಬಿಳುತ್ತವೋ ಕಾದು ನೋಡಬೇಕಾಗಿದೆ..

Edited By

Manjula M

Reported By

Manjula M

Comments