ಜೆಡಿಎಸ್ ಅಭ್ಯರ್ಥಿಯಾಗಿ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಅಖಾಡಕ್ಕೆ ಇಳಿಯುತ್ತಿದ್ದಾರೆ ಈ ಸ್ಟಾರ್ ನಟಿ..!?

09 Feb 2019 4:14 PM | Politics
5592 Report

ಮುಂಬರುವ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಯಾರು ಅಖಾಡಕ್ಕೆ ಇಳಿಯಬೇಕು ಎಂಬ ಚರ್ಚೆಗಳು ಶುರುವಾಗುತ್ತಿವೆ. ಇದೀಗ  ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ಆಪರೇಷನ್ ಕಮಲ ಜೋರಾಗಿಯೇ ನಡೆಯುತ್ತಿದೆ…. ಈ ನಡುವೆ ಯಾರಿಗೆ ಯಾವ ಕ್ಷೇತ್ರದಿಂದ ಟಿಕೆಟ್ ನೀಡಬೇಕು ಎಂಬುದರ ಬಗ್ಗೆ ಈಗಾಗಲೇ ಚರ್ಚೆ ಪ್ರಾರಂಭವಾಗಿದೆ.. ಈಗಾಗಲೇ ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಟಿ ಸುಮಲತಾ ಅಂಬರೀಶ್ ಗೆ ಟಿಕೆಟ್ ಕೊಡಬೇಕು ಎಂಬ ಒತ್ತಾಯ ಕೇಳಿಬರುತ್ತಿದ್ದರೆ,

ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಗೋಲ್ಡನ್ ಗರ್ಲ್ ಅಮೂಲ್ಯ ಕಣಕ್ಕೆ ಇಳಿಯುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.. ಅಮೂಲ್ಯ ಮಾವ ರಾಜಕಾರಣದಲ್ಲಿ ಗುರುತಿಸಿಕೊಂಡವರು. ಹೀಗಾಗಿ ನಟಿ ಅಮೂಲ್ಯ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲು ಒಲವು ತೋರಿದ್ದಾರಾ.?   ಬಿಜೆಪಿ ಪಕ್ಷದಿಂದ ಕಾರ್ಪೊರೇಟರ್ ಆಗಿದ್ದ ಅಮೂಲ್ಯ ಮಾವ ರಾಮಚಂದ್ರ ಇದೀಗ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಕಣಕ್ಕೆ ಇಳಿಯುತ್ತಾರ ಎಂಬುದನ್ನು ಕಾದು ನೋಡಬೇಕಿದೆ.

Sponsored

Edited By

Manjula M

Reported By

Manjula M

Comments