ಲೋಕಸಭಾ ಅಖಾಡಕ್ಕೆ ದೇವೇಗೌಡರ ಸ್ಪರ್ಧೆ ..?  ಯಾವ ಕ್ಷೇತ್ರದಿಂದ..!!?

04 Feb 2019 5:09 PM | Politics
2362 Report

ಮುಂಬರುವ ಲೋಕಸಭಾ ಚುನಾವಣೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೆಸರು ಹೆಚ್ಚಾಗಿ ಕೇಳಿಬಂದಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿದೆ.. ಮೈಸೂರು ಮತ್ತು ಕೊಡಗು ಕ್ಷೇತ್ರಗಲ್ಲಿ ಕಣಕ್ಕಿಳಿಯುವ ನಿರೀಕ್ಷ ಇದೆ. ಅಷ್ಟೆ ಅಲ್ಲದೆ, ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರೂ ಕೂಡ ದೇವೇಗೌಡರನ್ನೇ ಕಣಕ್ಕೆ ಇಳಿಸುವಂತೆ ಒತ್ತಾಯ ಮಾಡುತ್ತಿರುವುದರಿಂದ  ನಮ್ಮ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು..

ಬಿಎಸ್‍ವೈ ಡಿಸಿಎಂ ಆಗಿದ್ದರು. ಆ ವೇಳೆ ಕುಮಾರಸ್ವಾಮಿ ಅವರು ತೆಗೆದುಕೊಂಡಿದ್ದ ನಿರ್ಣಯಗಳು ಅಂತಿಮವಾಗಿದ್ದವು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‍ನ ಹಿರಿಯ ರಾಜಕಾರಣಿಗಳು ಮುತ್ಸದ್ದಿಗಳಾಗಿದ್ದಾರೆ. ಅವರು ಹೆಚ್ಚು ಹೆಚ್ಚು ಅನುದಾನಕ್ಕೆ ಬೇಡಿಕೆಯಿಡುತ್ತಿದ್ದಾರೆ. ಎಲ್ಲ ಕಾರ್ಪೋರೇಟ್  ಮಂಡಳಿಗಳನ್ನು ಅವರೇ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಜೆಡಿಎಸ್‍ನವರು ಯಾವುದೇ ಮಂಡಳಿ ತೆಗೆದುಕೊಂಡಿಲ್ಲ. ಹಾಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಹೆಚ್ಚು ಅವಕಾಶಸಿಗುತ್ತಿಲ್ಲ ಎಂಬ ಅರ್ಥದಲ್ಲಿ ಪುಟ್ಟರಾಜು ಹೇಳಿದ್ದಾರೆ ಎಂದು ಜಿಟಿ ದೇವೆಗೌಡ ಪ್ರತಿಕ್ರಿಯಿಸಿದರು. ಒಟ್ಟಾರೆ ,ಮುಂಬರುವ ಲೋಕಸಭಾ ಚುನಾವಣೆಯ ರಂಗು ದಿನ ದಿನಕ್ಕೆ ಕಾವುರುತ್ತಿದೆ…ಈ ಬಾರಿ ಅಧಿಕಾರದ ಗದ್ದುಗೆಯನ್ನು ಯಾರು ಹಿಡಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. 

Edited By

Manjula M

Reported By

Manjula M

Comments