ಕುಮಾರಣ್ಣನ ಸರ್ಕಾರಕ್ಕೆ ಬಿಗ್ ಶಾಕ್: ಮಂಡ್ಯದ ನಿರೀಕ್ಷಿತ ಅಭ್ಯರ್ಥಿ ಬಿಜೆಪಿ ಗೆ..!!?

04 Feb 2019 10:30 AM | Politics
13449 Report

ಮುಂಬರುವ ಲೋಕಸಭಾ ಚುನಾವಣೆಯ ರಂಗು ದಿನದಿಂದ ದಿನಕ್ಕೆ ರಂಗೇರುತ್ತಿದೆ.. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಅಭ್ಯರ್ಥಿಯ ಆಯ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ತಲೆನೋವಾಗಿದೆ.ಜೆಡಿಎಸ್ ಗೆ ಭದ್ರಕೋಟೆಯಾಗಿರುವ ಮಂಡ್ಯ ಕ್ಷೇತ್ರವನ್ನು ವಶ ಪಡಿಸಿಕೊಳ್ಳಲು ಬಿಜೆಪಿ ಮಾಸ್ಟರ್ ಫ್ಲಾನ್ ಮಾಡಿದೆ.. ಈಗಾಗಲೇ ಮಂಡ್ಯ ಕ್ಷೇತ್ರಕ್ಕೆ ಸುಮಲತಾ ಅಂಬರೀಶ್ ಹೆಸರು ಹೆಚ್ಚಾಗಿ ಕೇಳಿ ಬರುತ್ತಿದೆ. ಆದ್ರೆ ಸುಮಲತಾ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಾರಾ? ಅಥವಾ ಜೆಡಿಎಸ್‌ನಿಂದ ಕಣಕ್ಕಿಳಿಯುತ್ತಾರಾ ಎನ್ನುವ ಪ್ರಶ್ನೆ ಹಾಗೆಯೇ ಉಳಿದಿದೆ..

ಕಾಂಗ್ರೆಸ್ ಸುಮಲತಾ ಅವರನ್ನು ತಮ್ಮ ಪಕ್ಷದಿಂದ ಅಖಾಡಕ್ಕಿಳಿಸಲು ತೆರೆಮರೆಯ ಕಸರತ್ತು ನಡೆಸಿದರೆ, ಮತ್ತೊಂದೆಡೆ ಜೆಡಿಎಸ್ ನಿಖಿಲ್ ಕುಮಾರಸ್ವಾಮಿ ಅವರನ್ನು ಅಭ್ಯರ್ಥಿಯಾಗಿಸಲು ಚಿಂತನೆ ನಡೆಸಿದೆ. ಕೊನೆ ಕ್ಷಣದಲ್ಲಿ  ಸುಮಲತಾ ಮಂಡ್ಯದಿಂದ ಸ್ಪರ್ಧಿಸುವುದು ಖಚಿತವಾದರೆ, ಜೆಡಿಎಸ್‌ ಟಿಕೆಟ್ ನೀಡಿದರೂ ಆಶ್ಚಯಪಡುವ ಅವಶ್ಯಕತೆ ಇಲ್ಲ.. ಸುಮಲತಾರನ್ನ ಸೆಳೆಯಲು ಬಿಜೆಪಿ ಪ್ಲಾನ್ ಮಾಡುತ್ತಿದೆ. 2019ರ ಲೋಕಸಭಾ ಕ್ಷೇತ್ರದ ಚುನಾವಣೆಗೆ ಮಂಡ್ಯದ ಬಿಜೆಪಿ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್​​ ಅವರನ್ನು ಕಣಕ್ಕಿಳಿಸುವ ಬಗ್ಗೆ ಕಮಲ ಪಾಳಯದಲ್ಲಿ ಚಿಂತನೆ ನಡೆದಿದೆ ಎನ್ನಲಾಗಿದೆ. ಮಂಡ್ಯದಲ್ಲಿ ಈ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸುಮಲತಾ ಅವರ ಬಳಿ ಮಾತನಾಡುವಂತೆ ಮಾಜಿ‌ ಡಿಸಿಎಂ ಆರ್​ ಅಶೋಕ್​ ಹಾಗೂ ​ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ಬಳಿ ಚರ್ಚಿಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಸುಮಲತಾ ಬಿಜೆಪಿಯಿಂದ ಕಣಕ್ಕಿಳಿಯಲು ಒಪ್ಪಿದ್ರೆ ಬಿಜೆಪಿಯಿಂದ ಟಿಕೆಟ್​ ನೀಡಲು ರಾಜ್ಯಾಧ್ಯಕ್ಷರು ಸಮ್ಮಿತಿಸಿದ್ದಾರೆ ಎನ್ನಲಾಗಿದೆ.. ಒಂದು ವೇಳೆ ಸುಮಲತಾ ಅವರು ಬಿಜೆಪಿ ಎಂಟ್ರಿ ಕೊಟ್ಟರೆ  ಬಿಜೆಪಿ ಭರ್ಜರಿ ಆಫರ್ ಬಂದಂತೆ ಆಗುತ್ತದೆ.

Edited By

Manjula M

Reported By

Manjula M

Comments