ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ: ಸಚಿವ ರೇವಣ್ಣರಿಂದ ಯಡಿಯೂರಪ್ಪ ಭೇಟಿ..!! ಕಾರಣ ಏನಿರಬಹುದು…?

30 Jan 2019 10:47 AM | Politics
229 Report

ಈಗಾಗಲೇ ರಚನೆಯಾಗಿರುವ ಮೈತ್ರಿ ಸರ್ಕಾರದ ಬಗ್ಗೆ ಸಾಕಷ್ಟು ಊಹಾಪೋಹಗಳು ಕೇಳಿ ಬರುತ್ತಲೆ ಇವೆ… ಮೈತ್ರಿ ಸರ್ಕಾರದ ಕಾರ್ಯವೈಖರಿ ಕುರಿತು ಕೆಲ ಕಾಂಗ್ರೆಸ್ ಶಾಸಕರುಗಳು ಅಪಸ್ವರ ತೆಗೆದಿರುವ ಬೆನ್ನಲ್ಲೇ ದೋಸ್ತಿಗಳ ನಡುವಿನ ಶೀತಲ ಸಮರ ಇನ್ನೂ ತಾರಕಕ್ಕೇರಿದ್ದು, ಇದರ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ ಎಂದು ಹೇಳಲಾಗುತ್ತಿದೆ.. ಯಾವ ಸಮಯದಲ್ಲಿ ಯಾವ ರೀತಿಯ ಘಟನೆಗಳು ನಡೆಯುತ್ತವೆ ಎಂಬುದೆ ತಿಳಿಯುತ್ತಿಲ್ಲ….

ಈಗಾಗಲೇ ಮೈತ್ರಿ ಸರ್ಕಾರದಲ್ಲಿ  ಸೂಪರ್ ಸಿಎಂ ಎಂದೇ ಕರೆಯಲಾಗುತ್ತಿರುವ  ಸಚಿವ ಹೆಚ್.ಡಿ. ರೇವಣ್ಣ, ಮಂಗಳವಾರದಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರನ್ನು ಭೇಟಿಯಾಗಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತು ಸುಮಾರು ಒಂದು ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ…. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಇಂತಹ ಸಂದರ್ಭದಲ್ಲಿ ರಾಜ್ಯ ರಾಜಕಾರಣದಲ್ಲಿ ನಡೆದಿರುವ ಈ ದಿಢೀರ್ ಬೆಳವಣಿಗೆ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ರೇವಣ್ಣ ಏಕೆ ಬಿಎಸ್ ವೈ ಅವರನ್ನು ಭೇಟಿ ಮಾಡಿದ್ದಾರೆ ಎಂದು ಎಲ್ಲರೂ ತಲೆಕೆಡಿಸಿಕೊಳ್ಳುತ್ತಿರುವುದಂತು ಸುಳ್ಳಲ್ಲ…

Edited By

Manjula M

Reported By

Manjula M

Comments