`ಕೈ' ಶಾಸಕರ ಹೊಡೆದಾಟಕ್ಕೆ `ಬಿಜೆಪಿ'ಯೇ  ಕಾರಣ! ಹೊಸ ಬಾಂಬ್ ಸಿಡಿಸಿದ ‘ಜೆಡಿಎಸ್’ ಶಾಸಕ

25 Jan 2019 3:29 PM | Politics
566 Report

ಈಗಾಗಲೇ ಆಪರೇಷನ್ ಕಮಲ ಮಾಡಲು ಹೋಗಿ ಸೋಲನ್ನು ಕಂಡಿರುವ ಬಿಜೆಪಿಯು ಮತ್ತೆ ಮತ್ತೆ ಅದೇ ಕೆಲಸವನ್ನು ಮಾಡಲು ಮುಂದಾಗುತ್ತಿದೆ. ಕಾಂಗ್ರೆಸ್ ಶಾಸಕರನ್ನು ಬಿಜೆಪಿಯವರು ಕರೆದೊಯ್ಯಲು ಪ್ರಯತ್ನ ಮಾಡಿದ್ದರಿಂದಲೇ ರೆಸಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕರು ಬಡಿದಾಡಿಕೊಂಡಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಗಂಭೀರ ಆರೋಪವನ್ನು ಮಾಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೆಸಾರ್ಟ್ ನಲ್ಲಿ ಕೈ ಶಾಸಕರು ಹೊಡೆದಾಡಿಕೊಂಡಿರುವುದಕ್ಕೆ ಬಿಜೆಪಿ ಪಕ್ಷವೇ ಕಾರಣ ಎಂದಿದ್ದಾರೆ. ಅಷ್ಟೆ ಅಲ್ಲದೆ, ಆಪರೇಷನ್ ಕಮಲ ಮಾಡಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಯಡಿಯೂರಪ್ಪ ಅವರೇ ಮುಂದಾಗಿದ್ದಾರೆ ಎಂದು ಕಿಡಿಕಾರಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.. ಬಿಜೆಪಿ ಪಕ್ಷದ ನಾಯಕರು ಆಡಳಿತ ಪಕ್ಷದ ಎಲ್ಲಾ ಶಾಸಕರ ಜೊತೆಗೂ ಬಿಜೆಪಿ ಮಾತುಕತೆಗೆ ಪ್ರಯತ್ನ ಮಾಡಿದೆ ಎಂದು ಬಿಜೆಪಿ ವಿರುದ್ದ ಜಿ.ಟಿ. ದೇವೇಗೌಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಎನ್ನಲಾಗಿದೆ.. ಬಿಜೆಪಿ ಸೋಲನ್ನು ಕಂಡರೂ ಕೂಡ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ತಂತ್ರಗಳನ್ನು ಎಣೆಯುತ್ತಲೆ ಇದೆ.

Edited By

Manjula M

Reported By

Manjula M

Comments