ಬಿಜೆಪಿಗೆ ಭಾರೀ ಮುಖಭಂಗ: ‘ಕಮಲ’ ಪಾಳಯಕ್ಕೆ ಉಲ್ಟ ಆ ಹೊಡೆದ ‘ಕೈ’ ಶಾಸಕ..!!

24 Jan 2019 1:46 PM | Politics
1549 Report

ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ ಬಿಜೆಪಿ ನಡೆ ಇದೀಗ ಮತ್ತೊಮ್ಮೆ ಮುಖಭಂಗವಾಗಿದೆ… ಅತೃಪ್ತ ಶಾಸಕರನ್ನು ಸೆಳೆಯುವಲ್ಲಿ  ಸೋಲನ್ನು ಅನುಭವಿಸಿದೆ… ಮುಂಬೈ ನಲ್ಲಿ ಬೀಡು ಬಿಟ್ಟಿದ್ದ ಶಾಸಕರು ಇದೀಗ ಉಲ್ಟಾ ಹೊಡೆದಿದ್ದಾರೆ… ಕೊನೆಗೂ ಮುಂಬೈನಿಂದ ಸ್ವಗ್ರಾಮ ಬೆಡಸೂರಿಗೆ ಆಗಮಿಸಿ ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ಇದೀಗ ಬಿಜೆಪಿಗೆ ಬಿಗ್ ಶಾಕ್ ನೀಡಿದ್ದಾರೆ. 

ಅತೃಪ್ತ ಶಾಸಕರಲ್ಲಿ ಒಬ್ಬರಾದ ಚಿಂಚೋಳಿ ಶಾಸಕ ಉಮೇಶ್ ಜಾಧವ್ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೂ ಸಿಗದೆ ಮುಂಬೈ ನಲ್ಲಿ ಇದ್ದರು, ಅಲ್ಲದೇ ಕಾಂಗ್ರೆಸ್ ನ ಶಾಸಕಾಂಗ ಸಭೆಗೂ ಆಗಮಿಸಿರಲಿಲ್ಲ. ಈ ಎಲ್ಲಾ ವಿದ್ಯಾಮಾನಗಳನ್ನು ಗಮನಿಸಿ ಶಾಸಕ ಉಮೇಶ್ ಜಾಧವ್ ಬಿಜೆಪಿ ಸೇರ್ಪಡೆಯಾಗುತ್ತಾರೆ ಎನ್ನಲಾಗಿತ್ತು. ಆದರೆ ಇದೀಗ ಸ್ವಗ್ರಾಮಕ್ಕೆ ಆಗಮಿಸಿದ ಶಾಸಕ ಮಾಧ್ಯಮದವರೊಂದಿಗೆ  ಮಾತನಾಡಿ,'ನನ್ನನ್ನು ಯಾರು ಖರೀದಿಸಲು ಸಾಧ್ಯವಿಲ್ಲ. ನಾನು ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೇನೆ. ಆದರೆ ನನ್ನ ವಿರುದ್ಧ ಪ್ರತಿಭಟನೆ ನಡೆಸಿದ್ದು ಸರಿಯಲ್ಲ. ಅನಾರೋಗ್ಯದಿಂದ ಶಾಸಕಾಂಗ ಸಭೆಗೆ ಹಾಜರಾಗಲಿಲ್ಲ' ಎಂದು ಹೇಳುವ ಮೂಲಕ ಬಿಜೆಪಿಗೆ ಬಿಗ್ ಶಾಕ್ ನೀಡಿದ್ದಾರೆ. ರಾಜಕೀಯವಲಯದಲ್ಲಿ ಯಾರು ಯಾವಾಗ ಹೇಗೆ ಇರ್ತಾರೋ ಒಮದು ಗೊತ್ತಿಲ್ಲ.. ಅದಕ್ಕೆ ರಾಜಕೀಯವನ್ನು ದೊಂಬರಾಟಕ್ಕೆ ಹೋಲಿಸೋದು..

Edited By

Manjula M

Reported By

Manjula M

Comments