ವಿವಾದಕ್ಕೆ ಕಾರಣವಾಯ್ತು ಸಚಿವ ಪ್ರಿಯಾಂಕ್ ಖರ್ಗೆ ಮಾಡಿರುವ ಈ ಕೆಲಸ…!

23 Jan 2019 12:06 PM | Politics
256 Report

ತುಮಕೂರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ನಿಧನ ಹಿನ್ನಲೆಯಲ್ಲಿ ಇಡೀ ರಾಜ್ಯದಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು.. ಸ್ವಾಮೀಜಿಯನ್ನು ನೋಡಲು ಭಕ್ತಾಧಿಗಳು ಸಾಗರೋಪಾದಿಯಲ್ಲಿ ಸಾಗಿ ಬಂದಿದ್ದರು.. ಇದೇ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಮೂರು ದಿನಗಳ ಶೋಕಚಾರಣೆ ನಡೆಯುತ್ತಿರುವ ಮಧ್ಯೆ ಸಮಾಜ ಕಲ್ಯಾಣ ಇಲಾಖೆ ವಿಚಾರ ಸಂಕಿರಣ ನಡೆಸಿರುವ ಬಗ್ಗೆ ಖಂಡನೆ ವ್ಯಕ್ತವಾಗಿದ್ದು, ಈಗ ಅದು ವಿವಾದದ ಸ್ವರೂಪ ಪಡೆದುಕೊಳ್ಳುತ್ತಾ ಇದೆ.. ವಿವಾದದ ಹಿನ್ನಲೆಯಲ್ಲಿಯೂ ಕೂಡ ಈ ವಿಷಯ ಹೆಚ್ಚು ಚರ್ಚೆಗೆ ಕಾರಣವಾಗಿದೆ..

ಸಮಾಜ ಕಲ್ಯಾಣ ಇಲಾಖೆಯಿಂದ ಇಂದು ಖಾಸಗಿ ಹೋಟೆಲ್​ನಲ್ಲಿ ಸಂವಿಧಾನ ಸಂಭಾಷಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.. . ಶ್ರೀಗಳ ನಿಧನದ ನಂತರವೂ ಕೂಡ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಆದರೆ ವಿಚಾರ ಸಂಕಿರಣ ಮುಗಿದ ನಂತರ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ 'ನಮ್ಮ ಇಲಾಖೆಯಿಂದ ಯಾರಿಗೂ ಕೂಡ ಅಗೌರವ ತೋರಿಸಿಲ್ಲ. ನಾವು ಕಾರ್ಯಕ್ರಮದ ಆರಂಭದಲ್ಲಿ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದೇವೆ. ಇಡೀ ವಿಚಾರ ಸಂಕಿರಣ ಅವರಿಗೆ ಸಮರ್ಪಿಸಿದ್ದೇವೆ. ಬಸವಣ್ಣನವರು ಹೇಳಿದಂತೆ ಕಾಯಕವೇ ಕೈಲಾಸ ಎಂದರು. ಶ್ರೀಗಳು ಕೂಡ ಇದನ್ನೇ ಅನುಸರಿಸಿದರು. ಈ ತತ್ವದ ಆಧಾರದ ಮೇಲೆ ಈ ಕಾರ್ಯಕ್ರಮ ನಡೆಸಲು ಮುಂದಾದೆವು' ಎಂದು ಸ್ಪಷ್ಟಪಡಿಸಿದರು.

Edited By

Manjula M

Reported By

Manjula M

Comments