ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಬಿಜೆಪಿಗೆ…!?

23 Jan 2019 9:38 AM | Politics
1183 Report

ರಾಜಕೀಯ ವಲಯದಲ್ಲಿ ಸಾಕಷ್ಟು ಕಿತ್ತಾಟಗಳು ಒಳಜಗಳಗಳು ನಡೆಯುತ್ತಿದ್ದವು.. ಆದರೆ ಇದೀಗ ಆ ಜಗಳಗಳು ಹೊಡೆದಾಟಗಳು ಎಲ್ಲವೂ ಕೂಡ ಬಹಿರಂಗವಾಗಿಯೇ ನಡೆಯುತ್ತಿವೆ… ಆಪರೇಷನ್‌ ಕಮಲದ ಆತಂಕದ ಹಿನ್ನೆಲೆಯಲ್ಲಿ ರೆಸಾರ್ಟ್‌ ಸೇರಿದ್ದ ಕಾಂಗ್ರೆಸ್‌ ಶಾಸಕರು ಗಲಾಟೆ ಮಾಡಿಕೊಂಡ ಹಿನ್ನೆಲೆಯಲ್ಲಿಯೇ ಕಂಪ್ಲಿ ಶಾಸಕ ಜೆ.ಎನ್‌ ಗಣೇಶ್‌ ಅವರನ್ನು ಅಮಾನತು ಮಾಡಿ ಎಂಬ ಆದೇಶವನ್ನು  ಹೊರಡಿಸಲಾಗಿದೆ. ಆದರೆ ಇದೀಗ ಕಂಪ್ಲಿ ಶಾಸಕ ಜಿಜೆಪಿಗೆ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಎಸ್…ಕಾಂಗ್ರೆಸ್‌ನಿಂದ ಅಮಾನತುಗೊಂಡಿರುವ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.. ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರನ್ನು ಬಿಜೆಪಿ ಗಣೇಶ್ ಸೆಳೆಯಲು ಪ್ರಯತ್ನ ಆರಂಭಿಸಿದೆ ಎಂದು ಹೇಳಲಾಗುತ್ತಿದೆ. ಜೆ.ಎನ್.ಗಣೇಶ್ ಅವರನ್ನು ಪಕ್ಷಕ್ಕೆ ಸೆಳೆಯುವ ಮೂಲಕ ಬಲವನ್ನು ಹೆಚ್ಚಿಸಿಕೊಳ್ಳಲು ಬಿಜೆಪಿ ತಂತ್ರ ರೂಪಿಸಿದೆ. ಇನ್ನು ಈಗಲ್ಟನ್ ರೆಸಾರ್ಟ್ ನಲ್ಲಿ ಶಾಸಕ ಆನಂದ್ ಸಿಂಗ್ ಮೇಲೆ ಮಾಡಿದ್ದ ಕಂಪ್ಲಿ ಶಾಸಕ ಜಿ.ಎನ್.ಗಣೇಶ್ ವಿರುದ್ಧ ಬಿಡದಿ ಪೊಲೀಸರು ಎಫ್‌ಐಆರ್ ದಾಖಲಿಸುತ್ತಿದ್ದಂತೆ .ಗಣೇಶ್ ಕಣ್ಮರೆಯಾಗಿದ್ದಾರೆ. ಒಟ್ಟಾರೆಯಾಗಿ ಅಮಾನತು ಆದ ಶಾಸಕ ವಿರೋಧ ಪಕ್ಷಕ್ಕೆ ಹೋಗ್ತಾರ ಅನ್ನೋದು ಕುತೂಹಲಕಾರಿ ವಿಷಯ…

Edited By

Manjula M

Reported By

Manjula M

Comments