ಮುಂಬೈನಲ್ಲಿ ಬೀಡು ಬಿಟ್ಟಿರುವ  ಕಾಂಗ್ರೆಸ್ ಶಾಸಕರ ನಿಗೂಢ ನಡೆ..! ಆಪರೇಷನ್ ಕಮಲ ಅಭೀ ಬಾಕಿ ಹೇ..!!!

17 Jan 2019 12:38 PM | Politics
265 Report

ರಾಜಕೀಯ ವಲಯದಲ್ಲಿ ಇಷ್ಟು ದಿನ ಕೇಳಿ ಬರುತ್ತಿದ್ದ ಆಪರೇಷನ್ ಕಮಲ .. ಈ ಆಪರೇಷನ್ ಕಮಲವು ಇನ್ನೂ ಅದೆಷ್ಟು ದಿನ ನಡೆಯುತ್ತದೆಯೋ ಗೊತ್ತಿಲ್ಲ..  ರಾಜ್ಯ ರಾಜಕಾರಣದಲ್ಲಿ ಸಂಕ್ರಾಂತಿಯ ಮಹಾಪರ್ವ ಇಂದು ಮುಗಿಯುವ ಸಂಭವವಿದೆ.. ಮುಂಬೈನಲ್ಲಿ ಬಿಜೆಪಿ ಗೂಡು ಸೇರಿಕೊಂಡಿರುವ ಕಾಂಗ್ರೆಸ್‍ನ ಅತೃಪ್ತ ಶಾಸಕರು ಇಂದು ಮಧ್ಯಾಹ್ನ 3 ಗಂಟೆಯೊಳಗೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ..

ಬೆಂಗಳೂರಿಗೆ ಬರುವ ಶಾಸಕರು ರಾಜೀನಾಮೆ ಸಲ್ಲಿಸ್ತಾರಾ ಅಥವಾ ತಮ್ಮ ಹಳೆಯ ಗೂಡನ್ನು ಸೇರಿಕೊಳ್ಳುತ್ತಾರಾ? ಎಂಬ ಕುತೂಹಲ ಎಲ್ಲಾ ಶಾಸಕರಲ್ಲೂ ಮೂಡಿರೋದಂತು ಸುಳ್ಳಲ್ಲ… ಬೆಂಗಳೂರಿಗೆ ಆಗಮಿಸಲಿರುವ ಅತೃಪ್ತ ಶಾಸಕರು ನೇರವಾಗಿ ತಮ್ಮ ನಾಯಕ ಸಿದ್ದರಾಮಯ್ಯರ ಮನೆಗೆ ಹೋಗಲಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ವಿಮಾನ ನಿಲ್ದಾಣದಿಂದ ನೇರವಾಗಿ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸುವ ಸಾಧ್ಯತೆಗಳಿವೆ ಎಂಬುವುದು ಮತ್ತೆ ಕೆಲವರ ವಾದವಾಗಿದೆ. ಇತ್ತ ಗುರುಗ್ರಾಮದಲ್ಲಿರುವ ಬಿಜೆಪಿಯ ಶಾಸಕರು ಇಂದು ಸಂಜೆ ರೆಸಾರ್ಟ್ ಖಾಲಿ ಮಾಡಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಒಟ್ಟಾರೆಯಾಗಿ ಮುಂಬೈನಲ್ಲಿ ಬೀಡು ಬಿಟ್ಟಿರುವ ಶಾಸಕರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದು ಮಾತ್ರ ಯಾರಿಗೂ ತಿಳಿದಿಲ್ಲ..

Edited By

Manjula M

Reported By

Manjula M

Comments