ಮತ್ತೊಮ್ಮೆ ದೋಸ್ತಿ ಸರ್ಕಾರದ ಸಚಿವ ಸಂಪುಟ ಪುನರ್‌ ರಚನೆ..!?

16 Jan 2019 12:54 PM | Politics
121 Report

ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರದ ಬಗ್ಗೆ ಈಗಾಗಲೇ ವಿರೋಧ ಪಕ್ಷಗಳು ಸಾಕಷ್ಟು ಲೇವಡಿ ಮಾಡುತ್ತಿದ್ದಾರೆ.. ದೋಸ್ತಿ ಸರಕಾರದ ಸಚಿವ ಸಂಪುಟ ಪುನರ್‌ ರಚನೆಯಾದ ನಂತರ 10ಕ್ಕೂ ಹೆಚ್ಚು ಮಂದಿ ಶಾಸಕರು ಬಹಿರಂಗವಾಗಿಯೇ ಪಕ್ಷದ ವಿರುದ್ದ ಮಾತನಾಡಲು ಇದೀಗ ಶುರು ಮಾಡಿದ್ದರು. ಅಷ್ಟೆ  ಅಲ್ಲದೆ ಬಿಜೆಪಿಗೆ ಹೋಗುವ ಬಗ್ಗೆ ಕೂಡ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಕಳೆದ ಮೂರು-ನಾಲ್ಕು ದಿವಸದಿಂದ ಕೂಡ 10ಕ್ಕೂ ಅಧಿಕ ಮಂದಿ ಶಾಸಕರು ಯಾರ ಕೈಗೂ ಸಿಗದೇ ತಮ್ಮ ತಮ್ಮ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿಕೊಂಡು ಆಟವಾಡುತ್ತಿದ್ದರು.

ಅತೃಪ್ತ ಶಾಸಕರನ್ನು ಮನವೊಲಿಸಲು ಎಲ್ಲಾ ರೀತಿಯ ಪ್ರಯತ್ನಗಳು ನಡೆಯುತ್ತಿವೆ... ಈ ನಡುವೆ ಮಾಜಿ ಸಿಎಂ ಬಿಎಸ್ವೈ ಕೂಡ ಸದ್ಯದಲ್ಲೇ ಸಿಹಿ ಸುದ್ದಿ ನೀಡಲಿರುವೆ ಎನ್ನುವ ಮಾತು ಕೂಡ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಲ್ಲಿ ಹಾಗೂ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಉಂಟು ಮಾಡಿದ್ದಂತೂ  ಸುಳ್ಳಲ್ಲ ಎನ್ನಬಹುದು… ಸದ್ಯದಲ್ಲೇ ಸಚಿವ ಸಂಪುಟ ಪುನರ್ ರಚನೆಯಾಗಲಿದ್ದು, ಅದರಲ್ಲಿ ನಿಮಗೆ ಸಚಿವ ಸ್ಥಾನವನ್ನು ನೀಡಲಾಗುವುದು ಯಾವುದೇ ಕಾರಣಕ್ಕೂ ನೀವು ಅತುರ ಪಡಬೇಡಿ, ಕೂಡಲೇ ಬೆಂಗಳೂರಿಗೆ ಬಂದು ನಮ್ಮ ಜೊತೆ ಇದ್ದು ಬಿಡಿ ಅಂತ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಸಂಪುಟ ಪುನರ್ ರಚನೆಯಾದರೂ ಕೂಡ ಮತ್ತೆ ಮತ್ತೆ ಅತೃಪ್ತ ಶಾಸಕರು ಬರುವುದರಲ್ಲಿ ನೋಡೌಟ್

Edited By

Manjula M

Reported By

Manjula M

Comments