ಮತ್ತೆ ರಮೇಶ್ ಜಾರಕಿಹೋಳಿಗೆ ಮಂತ್ರಿ ಆಫರ್ ನೀಡಿದ ಕಾಂಗ್ರೆಸ್ ಹೈಕಮಾಂಡ್…!

16 Jan 2019 11:25 AM | Politics
220 Report

ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟದ ರಚನೆಯ ವೇಳೆಯಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದ್ದು, ಯಾರಿಗೆ ಯಾವ ಸ್ಥಾನ ನೀಡಬೇಕು ಎಮಬ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಇದರ ನಡುವೆಯೆ ಸಾಕಷ್ಟು ಮನಸ್ತಾಪಗಳು ಕೂಡ ಆಗಿದ್ದು ಸುಳ್ಳಲ್ಲ.. ಸ್ವಲ್ಪ ದಿನಗಳ ಹಿಂದೆ ರಮೇಶ್ ಜಾರಕಿಹೋಳಿಯವರು ರಾಜಿನಾಮೇ ನೀಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು, ಇದೀಗ . 'ನಿಮ್ಮೆಲ್ಲ ಬೇಡಿಕೆಗೆ ನಾವು ಸ್ಪಂದಿಸುತ್ತೇವೆ, ಮತ್ತೆ ಮಂತ್ರಿ ಸ್ಥಾನ ನೀಡುತ್ತೇವೆ, ನೀವು ಕೇಳಿದ ಖಾತೆಯನ್ನೇ ನೀಡೋಣ ಬನ್ನಿ' ಅಂತ ರಮೇಶ್ ಜಾರಕಿಹೊಳಿಗೆ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ ಎನ್ನಲಾಗಿದೆ.

ಸಮ್ಮಿಶ್ರ ಸರ್ಕಾರ ಸಚಿವ ಸಂಪುಟ ಪುನರ್ ರಚನೆಯಾದ ನಂತರ ಸಚಿವ ಸ್ಥಾನ ಕಳೆದುಕೊಂಡಿದ್ದ ರಮೇಶ್ ಜಾರಕಿಹೊಳಿ ನಂತರದ ದಿವಸದಲ್ಲಿ ಯಾರ ಕೈಗೂ ಸಿಗುತ್ತಿಲ್ಲ… ಅಷ್ಟೆ ಅಲ್ಲದೆ  ಆಪರೇಷನ್ ಕಮಲಕ್ಕೆ ಮೊದಲ ಬಲಿಯಾಗಿರುವ ರಮೇಶ್ ಕುಮಾರ್  ಸದ್ಯದಲ್ಲೇ ಬಿಜೆಪಿಗೆ ಸೇರಲಿದ್ದಾರೆ ಎನ್ನುವ ಮಾತು ರಾಜಕೀಯ ವಲಯದಲ್ಲಿ ಗಾಳಿ ಸುದ್ದಿಯಂತೆ ಕೇಳಿ ಬರುತ್ತಿದೆ. ನಿಮ್ಮನ್ನು ಮಂತ್ರಿ ಸ್ಥಾನದಿಂದ ಕೈಬಿಟ್ಟಿದ್ದು ಸರಿಯಲ್ಲ, ಮತ್ತೆ ಮಂತ್ರಿ ಸ್ಥಾನ ನೀಡುತ್ತೇವೆ. ಕೂಡಲೇ ನಮ್ಮನ್ನು ಸೇರಿಕೊಳ್ಳಿ ಪಕ್ಷ ಬಿಡುವುದು ನಿಮ್ಮ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲತಕ್ಷಣ ಅಲ್ಲಿಂದ ಹೊರಟು ಬನ್ನಿ, ಕುಳಿತು ಮಾತಾಡೋಣ ಕೆ.ಸಿ.ವೇಣುಗೋಪಾಲ್ ಅವರು ರಮೇಶ್ ಜಾರಕಿಹೋಳೀಯವರಿಗೆ  ಬುದ್ದಿಹೇಳಿದ್ದಾರೆ ಎಂದು ಹೇಳಲಾಗುತ್ತಿದೆ..

Edited By

Manjula M

Reported By

Manjula M

Comments