ಬಿಗ್ ಬ್ರೇಕಿಂಗ್ : ಅಭಿಷೇಕ್ ಅಂಬರೀಶ್’ಗೆ  ಟಿಕೆಟ್ ನಿರಾಕರಿಸಿದ ಸಿಎಂ ಎಚ್​ಡಿಕೆ..!! ಕಾರಣ ಏನ್ ಗೊತ್ತಾ..?

14 Jan 2019 3:16 PM | Politics
14166 Report

ದಿನದಿಂದ ದಿನಕ್ಕೆ ಮಂಡ್ಯ ಲೋಕಸಭಾ ಚುನಾವಣೆಯು ರಂಗೇರುತ್ತಿದೆ…ಯಾರಿಗೆ ಟಿಕೇಟ್ ಸಿಗೋತ್ತೋ ಎಂಬ ಗೊಂದಲದಲ್ಲಿ ಇದ್ದಾರೆ.. ಅಷ್ಟೆ ಅಲ್ಲದೆ ಟಿಕೆಟ್​ಗಾಗಿ ಹೋರಾಡೋದಕ್ಕೆ ಇದು ಮಹಾಭಾರತದ ಕುರುಕ್ಷೇತ್ರವಲ್ಲ ಎಂದು ಸಿಎಂ ಎಚ್​.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ರೆಬೆಲ್​ಸ್ಟಾರ್​ ಅಂಬರೀಶ್​ ಕುಟುಂಬಕ್ಕೆ ಟಿಕೆಟ್ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಮಂಡ್ಯ ಲೋಕಸಭಾ ಚುನಾವಣೆಯು ಮತ್ತಷ್ಟು ರಂಗೇರಲಿದೆ ಎಂದು ಹೇಳಲಾಗುತ್ತಿದೆ…

ಕುಮಾರಸ್ವಾಮಿಯವರು ಇಂದು  ಮಂಡ್ಯದಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡುವ ಸಮಯದಲ್ಲಿ ಸಂಸತ್ ಚುನಾವಣೆಗೆ ಅಂಬರೀಷ್​​ ಪತ್ನಿ ಸುಮಲತಾ, ಪುತ್ರ ಅಭಿಷೇಕ್ ಗೌಡ ಹೆಸರು ವಿಚಾರಕ್ಕೆ ಸಂಬಂಧಪಟ್ಟಂತೆ ಮಾಧ್ಯಮಗಳಿಗೆ ಉತ್ತರಿಸಿದ ಅವರು ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿ ಪ್ರಕಟ ಮಾಡುತ್ತೇನೆ ಅಂಬರೀಷ್​ ಕುಟುಂಬ ಕಾಂಗ್ರೆಸ್​ನಲ್ಲಿದೆ. ಅಂಬರೀಶ್ ಅವರು ಜೆಡಿಎಸ್ ಪಕ್ಷಕ್ಕೆ ಬಂದಿರಲಿಲ್ಲ. ರಾಜ್ಯದ ಸಿಎಂ ಆಗಿ ಅವರ ವಿಧಿವಶರಾದಾಗ ಗೌರವ ಸಲ್ಲಿಸಿದ್ದೇನೆ. ಟಿಕೆಟ್​ಗಾಗಿ ಹೋರಾಡೋದಕ್ಕೆ ಇದು ಮಹಾಭಾರತದ ಕುರುಕ್ಷೇತ್ರವಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.. ಈ ಹಿನ್ನಲೆಯಲ್ಲಿ ಅಭಿಷೇಕ್ ಗೆ ಟಿಕೇಟ್ ಸಿಗುತ್ತೋ ಇಲ್ಲವೋ ಎಂಬುದು ಸದ್ಯದ ಪ್ರಶ್ನೆ..

Edited By

Manjula M

Reported By

Manjula M

Comments