ಬಿಜೆಪಿಯ ಈ 20 ಶಾಸಕರು ನಮ್ಮ ಪಕ್ಷಕ್ಕೆ ಬರಲು ಸಿದ್ಧ- ಹೊಸ ಬಾಂಬ್ ಸಿಡಿಸಿದ 'ಕೈ' ಸಚಿವ

14 Jan 2019 2:54 PM | Politics
233 Report

ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ವಿರೋಧ ಪಕ್ಷಗಳು ಸಾಕಷ್ಟು ಪಿತೂರಿಯನ್ನ ನಡೆಸುತ್ತಿವೆ… ಆದರೆ ಇದಕ್ಕೆ ಬಗ್ಗದ ದೋಸ್ತಿ ಸರ್ಕಾರವು ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುತ್ತಿದೆ.. ಇದೀಗ ಅತೃಪ್ತ ಶಾಸಕರನ್ನು ಸೆಳೆಯುವಲ್ಲಿ ಬಿಜೆಪಿಯು ಶತ ಪ್ರಯತ್ನ ಮಾಡುತ್ತಿದೆ..ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಲಾಗಿದೆ..

ಬಿಜೆಪಿಯ 20 ಶಾಸಕರು ನಮ್ಮೊಂದಿಗೆ ಬರಲು ಸಿದ್ದರಾಗಿದ್ದಾರೆ. ಇನ್ನೇನು ಬಿಜೆಪಿಯವರು ಆಪರೇಷನ್ ಮಾಡ್ತಾರೆ, ನಮ್ಮ ಸಂಪರ್ಕದಲ್ಲಿರುವ ಬಿಜೆಪಿಯ 20 ಶಾಸಕರು ನಾವು ಕೈ ಹಾಕಿದರೆ ಕಾಂಗ್ರೆಸ್ ಗೆ ಬರುತ್ತಾರೆ ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ಹೇಳಿಕೊಂಡಿದ್ದಾರೆ.. ಇಂದು ದಾವಣಗೆರೆಯಲ್ಲಿ ಮಾತನಾಡಿದ ಅವರು ' ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಯಾರಿಂದಲೂ ಕೂಡ ಸಾಧ್ಯವಿಲ್ಲ, ಬಿಎಸ್ ಯಡಿಯೂರಪ್ಪ ಅವರು ಮತ್ತೆ ಸಿಎಂ ಆಗುವ ಭ್ರಮೆಯಲ್ಲಿ ಬದುಕುತ್ತಿದ್ದಾರೆ... ಅವರ ಕನಸು ಯಾವತ್ತು ನನಸಾಗುವುದಿಲ್ಲ. ಯಡಿಯೂರಪ್ಪ ಹಗಲು ಕನಸು ಕಾಣುತ್ತಿದ್ದಾರೆ. ಸಂಕ್ರಾಂತಿ ನಂತರ ಯಾವ ಕ್ರಾಂತಿ ಕೂಡ ಆಗುವುದಿಲ್ಲ ಎಂದು ತಿಳಿಸಿದ್ದಾರೆ.. ಒಟ್ಟಾರೆ ರಾಜಕೀಯದವರು ಯಾವ ಪಕ್ಷದಿಂದ ಯಾವ ಪಕ್ಷಕ್ಕೆ ಹೋಗುತ್ತಾರೆ ಎಂಬುದು ಮಾತ್ರ ನಿಗೂಢ.

Edited By

Manjula M

Reported By

Manjula M

Comments