ಆಪರೇಷನ್ ಕಮಲದ ಬಗ್ಗೆ ನನಗೆ ಗೊತ್ತಿಲ್ಲ ಎಂದ ಸಚಿವ ಸತೀಶ್ ಜಾರಕಿಹೊಳಿ..!!

11 Jan 2019 5:13 PM | Politics
212 Report

ಕೆಲವೊಮ್ಮೆ ರಾಜಕೀಯ ಅಂದರೆ ಅಯ್ಯೊ ಎನ್ನುವ ರೀತಿ ಆಗಿ ಬಿಡುತ್ತದೆ.. ದಿನಕ್ಕೊಂದು ಬಟ್ಟೆ ಬದಲಿಸುವ ಹಾಗೆ ಆಡಿರುವ ಮಾತುಗಳನ್ನು ಇಲ್ಲ ಎಂದೆ ವಾದ ಮಾಡುತ್ತಾರೆ. ಅಧಿಕಾರದಲ್ಲಿ ಇದ್ದವರು ಒಂದೊಂದು ಸಲ ಒಂದು ರೀತಿಯಲ್ಲಿ ಮಾತನಾಡುತ್ತಿರುತ್ತಾರೆ.. ವಿರೋಧ ಪಕ್ಷಗಳು ಈಗಿರುವ ಸರ್ಕಾರವನ್ನು ಉರುಳಿಸಲು ಒಂದಲ್ಲ ಒಂದು ಕುತಂತ್ರವನ್ನು ಮಾಡುತ್ತಿರುತ್ತಾರೆ.. ಆದರೆ ಈ ಬಗ್ಗೆ ಆಪರೇಷನ್ ಕಮಲದ ವಿಚಾರವಾಗಿ ನನಗೆ ಗೊತ್ತಿಲ್ಲ. ನಮ್ಮದು ಅಭಿವೃದ್ಧಿ ಹಾಗೂ ಇಲಾಖೆ ಕೆಲಸ ಅಷ್ಟೇ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮದವರ ಜೊತೆ  ಮಾತನಾಡಿದ ಸಚಿವ ಸತೀಶ್ ಜಾರಕಿಹೋಳಿ, ಬಿಜೆಪಿಯವರು ಏನೇ ಮಾಡಿದರೂ, ನಮ್ಮ ಶಾಸಕರು ಯಾರೂ ಕೂಡ ಹೋಗುವುದಿಲ್ಲ. ಇದು ಊಹಾಪೋಹ ಅಷ್ಟೇ, ನಮ್ಮ ಸರ್ಕಾರ ಸುಭದ್ರವಾಗಿದೆ. ರಾಜಕೀಯ ಪ್ರಯತ್ನ ಇದ್ದೆ ಇರುತ್ತೆ ಆದರೆ ಅದು ಯಾವುದೆ ಕಾರಣಕ್ಕೂ ಯಶಸ್ವಿಯಾಗುವುದಿಲ್ಲ ಎಂದು ತಿಳಿಸಿದರು.. . ಸಂಕ್ರಾಂತಿ ನಂತರ ಕ್ರಾಂತಿ ಆಗುತ್ತೆ ಎಂಬ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕ್ರಾಂತಿ ಆದರೂ ಕೂಡ ರಾಜ್ಯವು ಇಲ್ಲೇ ಇರುತ್ತದೆ.ಎಲ್ಲೂ ಹೋಗುವುದಿಲ್ಲ.. ಏನು ಆಗುವುದಿಲ್ಲ. ಕ್ರಾಂತಿ ಆದರೂ ನಾವು ಇಲ್ಲೇ ಇರುತ್ತೇವೆ. ನಡೆಯುವುದೆಲ್ಲ ನಡೆಯುತ್ತಲ್ಲೇ ಇರುತ್ತದೆ ಎಂದು ತಿಳಿಸಿದರು..  ಆಪರೇಷನ್ ಕಮಲದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಸ್ಪಷ್ಟ ಪಡಿಸಿದರು.

Edited By

Manjula M

Reported By

Manjula M

Comments