ಸಚಿವ ಪುಟ್ಟರಂಗಶೆಟ್ಟಿ ಪರ ಬ್ಯಾಟಿಂಗ್  ಬೀಸಿದ ಡಿಕೆ ಶಿವಕುಮಾರ್..!

09 Jan 2019 11:05 AM | Politics
496 Report

ಕೆಲ ದಿನಗಳ ಹಿಂದಷ್ಟೆ ವಿಧಾನಸೌಧದಲ್ಲಿ ಹಣ ಸಿಕ್ಕದ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು.. ಈ  ಪ್ರಕರಣಕ್ಕೂ, ಸಚಿವ ಪುಟ್ಟರಂಗ ಶೆಟ್ಟಿ ಅವರಿಗೂ ಸಂಬಂಧವಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ. ಹಣ ತೆಗೆದುಕೊಂಡು ಹೋಗುತ್ತಿದ್ದ ವ್ಯಕ್ತಿ ವಿರುದ್ಧ ತನಿಖೆಯು ನಡೆಯುತ್ತಿದೆ, ಪೊಲೀಸರು ಇದರ ಸೂಕ್ತ ಕ್ರಮಕೈಗೊಳ್ಳುತ್ತಾರೆ.

ಈ ಪ್ರಕರಣಕ್ಕೂ ಪುಟ್ಟರಂಗಶೆಟ್ಟಿ ಅವರಿಗೆ ಸಂಬಂಧ ಕಲ್ಪಿಸುವುದು ಸರಿಯಲ್ಲ ಎಂದು ಪುಟ್ಟರಂಗಶೆಟ್ಟಿ ಪರವಾಗಿ ಡಿಕೆಶಿ ಬ್ಯಾಟಿಂಗ್ ಮಾಡಿದ್ದಾರೆ. ಈ ಹಿಂದೆ ಕೋಟ್ಯಂತರ ರೂಪಾಯಿ ಹಣವನ್ನು ವಿಧಾನಸೌಧಕ್ಕೆ ತರಲಾಗುತ್ತಿತ್ತು. ಆ ರೀತಿ ಈಗ ನಡೆಯುವುದಿಲ್ಲ ಎಂಬ ಬಿಜೆಪಿಯವರ ಟೀಕೆಗಳಿಗೆ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.ಸರ್ಕಾರದಲ್ಲಿ ಯಾವ ಕಮೀಷನ್ ವ್ಯವಹಾರವೂ ನಡೆಯುತ್ತಿಲ್ಲ, ಭ್ರಷ್ಟಚಾರವೂ ಇಲ್ಲ. ಇದೇ ತಿಂಗಳ 8 ರಿಂದ ವಿಧಾನಸಭೆ ಅಧಿವೇಶನವನ್ನು ಕರೆಯಲಾಗುತ್ತಿದೆ. ಬಿಜೆಪಿಯವರು ಹೊರಗಡೆ ನಿಂತು ಟೀಕೆ, ಆರೋಪ ಮಾಡುತ್ತಿರುವುದನ್ನು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಲಿ. ನಾವು ಸೂಕ್ತ ಉತ್ತರ ಕೊಡುತ್ತೇವೆ ಎಂದು ಶಿವಕುಮಾರ್ ಸವಾಲು ಹಾಕಿದರು.

Edited By

Manjula M

Reported By

Manjula M

Comments