ಮೈತ್ರಿ ಸರ್ಕಾರದಲ್ಲಿ ಮತ್ತೊಬ್ಬ ಕಾಂಗ್ರೆಸ್ ನಾಯಕ ಔಟ್..!?

09 Jan 2019 9:40 AM | Politics
258 Report

ರಾಜಕೀಯ ವಲಯದಲ್ಲಿ ಒಳಗೊಳಗೆ ಕಿತ್ತಾಟಗಳು,ಜಗಳಗಳು ಹೊಸದೇನಲ್ಲ… ಇದೀಗ ಅಂತಹ ಜಗಳಗಳು ಬೀದಿಗೆ ಬಂದಿವೆ.. ಇದೀಗ ಕರ್ನಾ​ಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅಧ್ಯ​ಕ್ಷ​ರ​ನ್ನಾಗಿ ಕಾಂಗ್ರೆಸ್‌ ನಾಯ​ಕತ್ವ ಸೂಚಿ​ಸಿ​ರುವ ಚಿಕ್ಕ​ಬ​ಳ್ಳಾ​ಪುರ ಶಾಸಕ ಡಾ.ಸುಧಾ​ಕರ್‌ ಅವರಿಗೆ ಇರುವ ಹುದ್ದೆಯನ್ನು ತಪ್ಪಿ​ಸಲು ರೆಡ್ಡಿಯಾಗಿರುವ ಜೆಡಿ​ಎಸ್‌ ನಾಯ​ಕತ್ವವು ಮಂಡ​ಳಿಯ ಅಧ್ಯಕ್ಷ ಹುದ್ದೆಗೆ ಇರುವ ಮಾನ​ದಂಡಗಳನ್ನು ಬಹು ಬೇಗ ಬದ​ಲಾ​ಯಿ​ಸಲು ಮುಂದಾ​ಗಿದ್ದು, ಜ.15ರಂದು ನಡೆ​ಯ​ಲಿ​ರುವ ಸಚಿವ ಸಂಪುಟ ಸಭೆ​ಯಲ್ಲಿ ಮಂಡಳಿ ಅಧ್ಯಕ್ಷ ಹುದ್ದೆಗೆ ಪರಿ​ಷ್ಕೃತ ಮಾನ​ದಂಡಕ್ಕೆ ಒಪ್ಪಿಗೆ ಪಡೆ​ಯಲು ಮುಂದಾ​ಗಿದೆ ಎಂದು ಕಾಂಗ್ರೆಸ್‌ ಮೂಲ​ಗಳು ಜೆಡಿಎಸ್ ಮೇಲೆ ಆರೋಪ ವ್ಯಕ್ತ ಪಡಿಸಿದ್ದೇವೆ…

ಸುಪ್ರೀಂ ಕೋರ್ಟ್ ನೀಡಿರುವ ಆದೇಶದಂತೆ ವಿಜ್ಞಾನ ಶಾಖೆ​ಯಲ್ಲಿ ಸ್ನಾತ​ಕೋ​ತ್ತರ ಪದವಿ ಹಾಗೂ ಎಂಜಿ​ನಿ​ಯ​ರಿಂಗ್‌ ಶಾಖೆ​ಯಲ್ಲಿ ಸ್ನಾತಕ ಪದವಿ ಪಡೆ​ದಿ​ರು​ವ​ವರು ಮಾತ್ರ ಅರ್ಹರು ಎಂದು ಮಾನ​ದಂಡ ಬದ​ಲಾ​ದರೆ ಸಹ​ಜ​ವಾ​ಗಿಯೇ ವೈದ್ಯ ಪದವಿ ಪಡೆ​ದಿ​ರುವ ಡಾ.ಸುಧಾ​ಕರ್‌ ಅವರು ಅನ​ರ್ಹ​ರಾ​ಗು​ವಂತೆ ಮಾಡಿದಂತಾ​ಗು​ತ್ತದೆ. ಜೆಡಿ​ಎಸ್‌ ವರಿ​ಷ್ಠರ ಈ ತರಾ​ತುರಿ ನಿರ್ಧಾ​ರದ ಹಿಂದೆ ಕಾಂಗ್ರೆಸ್‌ ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ಅವರ ಕಟ್ಟಾ ಬೆಂಬ​ಲಿ​ಗ​ರಾಗಿ ನಿಂತಿ​ರುವ ಪ್ರಮುಖ ಒಕ್ಕ​ಲಿಗ ಸಮು​ದಾ​ಯದ ಶಾಸಕ ಸುಧಾ​ಕರ್‌ ಅವ​ರಿಗೆ ಹುದ್ದೆ ತಪ್ಪಿ​ಸುವ ಮೂಲಕ ಪರೋ​ಕ್ಷ​ವಾಗಿ ಸಿದ್ದ​ರಾ​ಮಯ್ಯ ಅವ​ರಿಗೆ ಟಾಂಗ್‌ ನೀಡುವ ಉದ್ದೇ​ಶ​ವಿದೆ ಎಂದು ಕಾಂಗ್ರೆಸ್‌ ವಲ​ಯ​ದಲ್ಲಿ ಇದೀಗ ಬಾರೀ ಚರ್ಚೆಯಾಗುತ್ತಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ನಿಂದ ಇದೀಗ ಕೆಲವು ಶಾಸಕರಿಗೆ ಕೊಕ್ ನೀಡಲು ಮುಂದಾಗಿದ್ದಾರೆ.

Edited By

Manjula M

Reported By

Manjula M

Comments