ಬ್ರೇಕಿಂಗ್ : ಲೋಕಸಭಾ ಚುನಾವಣೆಗೆ ಅಂಬರೀಶ್ ಪುತ್ರ ಸ್ಪರ್ಧೆ..? ಯಾವ ಕ್ಷೇತ್ರ ಗೊತ್ತಾ..?

08 Jan 2019 10:38 AM | Politics
6197 Report

ಮುಂಬರುವ ಲೋಕಸಭಾ ಚುನಾವಣೆ ಮೈತ್ರಿ ಸರ್ಕಾರಕ್ಕೆ ಪ್ರತೀಕ್ಷೆಯ  ಅಖಾಡವಾಗಿದೆ.  ಜೆಡಿಎಸ್ ಕಾಂಗ್ರೆಸ್ ಮೈತ್ರಿ ಯಾಗಿ ಲೋಕಸಭಾ ಚುನಾವಣೆ ಎದುರಿಸಿದ್ದರೆ…ಹಾಸನ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಟ್ಟರೆ, ಮಂಡ್ಯವನ್ನು ಕಾಂಗ್ರೆ ಸ್‌ಗೆ ಬಿಟ್ಟುಕೊಡು ವಂತೆ ಷರತ್ತು ವಿಧಿಸಲು ಕಾಂಗ್ರೆಸ್ ನಾಯಕತ್ವವನ್ನು ಆಗ್ರಹಿಸಲು ಪಕ್ಷದ ಮಾಜಿ ಶಾಸಕರ ಗುಂಪು ಇದೀಗ ತೀರ್ಮಾನ ಕೈಗೊಂಡಿದೆ..

ಅಷ್ಟೆ ಅಲ್ಲದೇ ಮಂಡ್ಯ  ಕ್ಷೇತ್ರದ ಟಿಕೆಟ್ ಅನ್ನು ಅಂಬರೀಶ್ ಅವರ ಪುತ್ರ ಅಭಿಷೇಕ್ ಗೆ ನೀಡಿ ಕಣಕ್ಕೆ ಇಳಿಸೋಣ ಎಂದು ಮಾತನಾಡಿಕೊಂಡಿದ್ದಾರೆ ..ನಗರದಲ್ಲಿ ಮಾಜಿ ಸಚಿವ ಎ. ಮಂಜು ನಿವಾಸದಲ್ಲಿ ಸೋಮವಾರ ಸಭೆ ನಡೆಸಿದ ಕಾಂಗ್ರೆಸ್‌ನ ಮಾಜಿ ಶಾಸಕರು ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಅಸ್ತಿತ್ವವನ್ನು ಉಳಿಸಿಕೊಳ್ಳಲು ಇಂತಹ ತೀರ್ಮಾನ ಕೈಗೊಳ್ಳಬೇಕು ಎಂದು ಪಕ್ಷದ ನಾಯಕತ್ವನ್ನು ಒತ್ತಾಯಿಸಲು ತೀರ್ಮಾನ ಮಾಡಿದ್ದಾರೆ. ಒಟ್ಟಾರೆ ಅಭಿಷೇಕ್ ಅಂಬರೀಶ್ ಅಖಾಡಕ್ಕೆ ಇಳಿಯುತ್ತಾರೋ ಇಲ್ಲವೋ ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments