‘ಬಿಜೆಪಿ’ಗೆ ಬಿಗ್ ಶಾಕ್..!!! ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿ ‘ಕಮಲ’ ಪಡೆ

07 Jan 2019 5:05 PM | Politics
9509 Report

 ಧಾರವಾಡ ಜಿಲ್ಲಾ ಪಂಚಾಯತ್’ ನಲ್ಲಿ ಭಿನ್ನಮತ ಸ್ಪೋಟಗೊಂಡಿದ್ದು,  ಬಿಜೆಪಿ ಪಕ್ಷದಲ್ಲಿ ಭುಗಿಲೆದ್ದ ವಾತವರಣ ಸಂಭವಿಸಿದೆ.. ಧಾರವಾಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾದ  ಚೈತ್ರಾ ಶಿರೂರ ವಿರುದ್ದ ಅವಿಶ್ವಾಸ ನಿರ್ಣಯಕ್ಕೆ 11 ಜನ ಜಿಲ್ಲಾ ಪಂಚಾಯತಿಯ ಕಾಂಗ್ರೆಸ್ ಸದಸ್ಯರು ಸಹಿ ಹಾಕಿದ್ದಾರೆ ಎನ್ನಲಾಗಿದ್ದು, 22 ಸದಸ್ಯ ಬಲದ ಧಾರವಾಡ ಜಿಲ್ಲಾ ಪಂಚಾಯತಿಯಲ್ಲಿ 11 ಜನ ಕಾಂಗ್ರೆಸ್, 10 ಬಿಜೆಪಿ ಸೇರಿದಂತೆ ಓರ್ವ ಪಕ್ಷೇತರ ಸದಸ್ಯರಿದ್ದಾರೆ. ಈಗಾಗಲೇ ಪಕ್ಷೇತರ ಸದಸ್ಯರನ್ನು ಸೆಳೆದುಕೊಂಡಿರುವ  ಬಿಜೆಪಿ ಜಿಲ್ಲಾ ಪಂಚಾಯತಿಯ ಅಧಿಕಾರದ ಗದ್ದುಗೆಯನ್ನು ಏರಿತ್ತು…ಅಲ್ಲದೇ ಉಪಾಧ್ಯಕ್ಷ  ಸ್ಥಾನವನ್ನು ಪಕ್ಷೇತರರಾಗಿ ಆಯ್ಕೆಯಾಗಿದ್ದ ಶಿವಾನಂದ ಕರಿಗಾರರಿಗೆ ಬಿಟ್ಟುಕೊಡಲಾಗಿತ್ತು ಎನ್ನಲಾಗಿದೆ.

ಇನ್ನೂ ಉಪಾಧ್ಯಕ್ಷರಾಗಿದ್ದ ಶಿವಾನಂದ ಕರಿಗಾರ ಕಾಂಗ್ರೆಸ್ ಕಡೆ ವಾಲಿದ್ದು, ಅಧ್ಯಕ್ಷೆ ಚೈತ್ರಾ ಶಿರೂರ ವಿರುದ್ದ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.ಕಾನೂನು ಪ್ರಕಾರ ಅವಿಶ್ವಾಸ ನಿರ್ಣಯದ ನೋಟಿಸನ್ನು ಅಧ್ಯಕ್ಷರಿಗೆ ನೀಡಬೇಕಾಗಿದ್ದು, ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಅವರ ಆಪ್ತ ಕಾರ್ಯದರ್ಶಿಗೆ ನೀಡಲಾಗಿದೆ. ಜಿಲ್ಲಾ ಪಂಚಾಯಿತಿಯಲ್ಲಿ ಅಧ್ಯಕ್ಷೆ ಚೈತ್ರಾ ಶಿರೂರ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದ್ದು, ಅಭಿವೃದ್ಧಿ ಕುಂಠಿತ ಗೊಂಡಿದ್ದರಿಂದ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿದ್ದೆವೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ  ಅನಿಲ್ ಕುಮಾರ್ ಪಾಟೀಲ್ ಈ ಮೂಲಕ ತಿಳಿಸಿದ್ದಾರೆ. ಇನ್ನೂ ಒಬ್ಬೊಬ್ಬರೆ ಅಧಿಕಾರದಿಂದ ಹಿಂದೆ ಸರಿಯುತ್ತಿರುವುದು ಬಿಜೆಪಿ ಗೆ ಶಾಕ್ ಆದ ಆಗಿದೆ.

Edited By

Manjula M

Reported By

Manjula M

Comments