ಲೋಕಸಭಾ ಚುನಾವಣೆ ಮುನ್ನವೇ ಕಾಂಗ್ರೆಸ್’ಗೆ  ಬಿಗ್ ಶಾಕ್ : ‘ ‘ಕೈ’ ಗೆ ಕೈ ಕೊಟ್ಟ ಅಧ್ಯಕ್ಷ..!!

05 Jan 2019 10:08 AM | Politics
2943 Report

ಈಗಾಗಲೇ ಮುಂಬರುವ ಲೋಕಸಭಾ ಚುನಾವಣೆಗೆ  ಎಲ್ಲಾ ಪಕ್ಷದವರು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.. 2019ರ ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವ ಬೆನ್ನಲ್ಲೇ, ದೆಹಲಿ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಜಯ್‌ ಮಾಕನ್‌ ಅವರು ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಅನಾರೋಗ್ಯದ ಸಮಸ್ಯೆಯಿಂದಾಗಿ ತಾವು ದೆಹಲಿ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಮಾಕನ್‌ ತಮ್ಮ ರಾಜೀನಾಮೆ ಪ್ರತಿಯಲ್ಲಿ ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಶುಕ್ರವಾರ ಮಾತನಾಡಿದ ಮಾಕನ್‌, 'ನನ್ನ ರಾಜೀನಾಮೆಯನ್ನು ಪಕ್ಷ ಅಂಗೀಕರಿಸಿದೆ. ಆದಾಗ್ಯೂ, 2019ರ ಲೋಕಸಭಾ ಚುನಾವಣೆಗೆ ಪಕ್ಷಕ್ಕಾಗಿ ನಾನು ದುಡಿಯುತ್ತೇನೆ,' ಎಂದಿದ್ದಾರೆ. 'ಕಳೆದ ವರ್ಷದ ಸೆಪ್ಟೆಂಬರ್‌ನಲ್ಲೇ ರಾಜೀನಾಮೆ ಸಲ್ಲಿಸಿದ್ದೆ. ಆದರೆ, ಅದು ಅಂಗೀಕಾರವಾಗಿರಲಿಲ್ಲ. ಇದೀಗ ಮತ್ತೊಮ್ಮೆ ರಾಹುಲ್‌ ಅವರನ್ನು ಭೇಟಿ ಮಾಡಿ, ರಾಜೀನಾಮೆ ಅಂಗೀಕರಿಸುವಂತೆ ಮನವಿ ಮಾಡಿದ್ದೆ,' ಎಂದು ತಿಳಿಸಿದ್ದಾರೆ. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದಂತೆ ಪಕ್ಷದವರು ಈ ರೀತಿ ತಮ್ಮ ತಮ್ಮ ಪಕ್ಷದಿಂದ ಹಿಂದೆ ಸರಿಯುವುದರಿಂದ ಸ್ವಪಕ್ಷಗಳಲ್ಲಿ ಭಿನ್ನಮತ  ಶುರುವಾಗಿದ ಎನ್ನಬಹುದು.

Edited By

Manjula M

Reported By

Manjula M

Comments