ಬಿಜೆಪಿಯಲ್ಲಿ ಮೇಜರ್​​ ಸರ್ಜರಿ ಮಾಡಲು ಮುಂದಾದ ಬಿಎಸ್ ಯಡಿಯೂರಪ್ಪ..!! ವಿವಿಧ ಸ್ಥಾನಗಳ ನಾಯಕರುಗಳಿಗೆ ಕೊಕ್..!!!

04 Jan 2019 5:22 PM | Politics
176 Report

ಮುಂಬರುವ ಲೋಕಸಭಾ ಚುನಾವಣೆಯ ರಾಜ್ಯದ ಬಿಎಸ್​​ವೈ ನೇತೃತ್ವದ ಬಿಜೆಪಿ ಪಡೆ  ತಮ್ಮ ಪಕ್ಷನ್ನು ಸಂಘಟನೆ ಮಾಡಲು ಮುಂದಾಗಿದೆ. ಇನ್ನೂ  ಇದೇ ವೇಳೆ ಪಕ್ಷದಲ್ಲಿ ಅಮೂಲಾಗ್ರ ಬದಲಾವಣೆಗೆ ಮುಂದಾಗಿದ್ದಾರೆ ಎನ್ನಲಾಗಿದ್ದು, ವಿವಿಧ ಸ್ಥಾನಗಳಲ್ಲಿದ್ದು, ಸಕ್ರಿಯವಾಗಿಲ್ಲದ ವಿವಿಧ ಮೋರ್ಚಾಗಳ ಅಧ್ಯಕ್ಷರು ಪದಾಧಿಕಾರಿಗಳ ಬದಲಾವಣೆ ಬಿಸ್ವೈ ಮುಂದಾಗಿದ್ದಾರೆ ಎನ್ನಲಾಗಿದೆ. ಬಿಎಸ್ ವೈ ವಿಧಾನಸಭಾ  ಚುನಾವಣೆಯಲ್ಲಿ ಬಹುಮತ ಗಳಿಸಿದ್ದರೂ ಕೂಡ ಮುಖ್ಯಮಂತ್ರಿಯಾಗಲು ಸಾಧ್ಯವಾಗಲಿಲ್ಲ..

ಹಾಗಾಗಿ ಮುಂಬರುವ ಲೋಕಸಭಾ ಚುನಾವಣೆಗೆ ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾ‌ಜ್ಯದಿಂದ ಅತಿ ಹೆಚ್ಚು ಸಂಸದರನ್ನು ಲೋಕಸಭೆಗೆ ಕಳುಹಿಸಿಕೊಡಬೇಕು, ಈ ಮೂಲಕ ರಾಜ್ಯದಲ್ಲಿ ತಮ್ಮ ನಾಯಕತ್ವ ಎಷ್ಟರ ಮಟ್ಟಿಗೆ ಇದೆ ಎನ್ನುವುದನ್ನು ಹೈಕಮಾಂಡ್ ಗೆ ತಿಳಿಸುವುದು ಬಿಎಸ್ ಯಡಿಯೂರಪ್ಪನವರ ಮುಂದಿರುವ ಗುರಿಯಾಗಿದೆ. 28 ಲೋಕಸಭಾ ಕ್ಷೇತ್ರಕ್ಕೂ ಯಡಿಯೂರಪ್ಪ ಅವರೇ ಟಿಕೆಟ್ ಫೈನಲ್ ಮಾಡುವುದಾಗಿದ್ದು, ಯಾರಿಗೆ ಟಿಕೆಟ್​ ನೀಡಬೇಕು ಎಂಬ ಅಂತಿಮ ನಿರ್ಧಾರ ಮಾಡುತ್ತಾರೆ ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಗೆ ಈಗಿಂನಿಂದಲೇ ಎಲ್ಲಾ ರೀತಿಯ ಸಿದ್ದತೆಯನ್ನು ನಡೆಸುತ್ತಿದ್ದಾರೆ

Edited By

Manjula M

Reported By

Manjula M

Comments