ದೋಸ್ತಿ ಸರ್ಕಾರ ಪತನವಾದ್ರೆ ಖುಷಿ ಪಡೋದು ಯಾರಂತೆ ಗೊತ್ತಾ..? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಬಿಜೆಪಿ ಶಾಸಕರು..!!

02 Jan 2019 6:08 PM | Politics
303 Report

ದೋಸ್ತಿ ಸರ್ಕಾರ ಪತನವಾಗಬೇಕು ಅಂತ ವಿಪಕ್ಷಗಳು ನಾನಾ ರೀತಿಯ ತಂತ್ರಗಳನ್ನು ಮಾಡುತ್ತಿದ್ದಾರೆ. ಅದಕ್ಕೆ ಸರಿಯಾಗಿಯೇ ದೋಸ್ತಿ ಸರ್ಕಾರವು ಪ್ರತಿತಂತ್ರವನ್ನು ಮಾಡುತ್ತಿದೆ.. ಅಕಸ್ಮಾತ್ ದೋಸ್ತಿ ಸರ್ಕಾರ ಪತನವಾದ್ರೆ ಮೋಸ್ಟ್ ಹ್ಯಾಪಿಯೆಸ್ಟ್ ಪರ್ಸನ್' ಯಾರು ಅನ್ನೋದನ್ನ ಬಿಜೆಪಿ ಶಾಸಕ ತಿಳಿಸಿದ್ದಾರೆ.. ಒಂದು ವೇಳೆ ಸರ್ಕಾರ ಪತನವಾದ್ರೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಯವರಿಗೆ ಖುಷಿಯಂತೆ… ಹೌದು, ಈ ಬಗ್ಗೆ ಅವರು ಇಂದು ನಗರದ ಬಿಜೆಪಿ ಕಚೇರಿಯಲ್ಲಿ ಬಿ.ಜೆ.ಪುಟ್ಟಸ್ವಾಮಿ ಹಾಗೂ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿಯನ್ನು ಹೊರಹಾಕಿದರು...

ಇದೇ ವೇಳೆ ಅವರು ಮಾತನಾಡಿ ಕುಮಾರಸ್ವಾಮಿಯವರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಅಧಿಕಾರಕ್ಕೆ ಬರುವ ಕನಸು ಅವರಲ್ಲಿರಲಿಲ್ಲ. ಹಾಗಾಗಿ ಅವರು ಬಹಳ ಸುಲಭವಾಗಿ ಆಶ್ವಾಸನೆಗಳನ್ನು ಕೊಟ್ಟಿದ್ದಾರೆ ಅಂತ ಹರಿಹಾಯ್ದರು.ಇನ್ನು ರಾಜ್ಯದ ಜನಸಂಖ್ಯೆಯಲ್ಲಿ ಶೇ. 32.8ರಷ್ಟು ಹಿಂದುಳಿದ ವರ್ಗದ ಜನರಿದ್ದಾರೆ. ಈಗಾಗಲೇ ರಾಜ್ಯ, ಜಿಲ್ಲೆ, ಮಂಡಲ, ಬೂತ್ ಮಟ್ಟದಲ್ಲಿ ಬಿಜೆಪಿ ಒಬಿಸಿ ಮೋರ್ಚಾ ಸಕ್ರಿಯವಾಗಿದೆ. ಮೊದಲು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತಗಳು ಕಡಿಮೆ ಆಗಿರುವ ಕಡೆ ಸಮಿತಿಗಳನ್ನ ಬಲ ಪಡಿಸುತ್ತಿವಿ ಎಂದು ತಿಳಿಸಿದರು.. .ಒಟ್ಟಾರೆ ದೋಸ್ತಿ ಸರ್ಕಾರ ಪತನವಾಗಬೇಕು ಎಂದು ಎಲ್ಲರು ಕಾಯುತ್ತಿದ್ದಾರೆ.

Edited By

Manjula M

Reported By

Manjula M

Comments