ಕುತೂಹಲ ಕೆರಳಿದ ಶಾಸಕ ರಮೇಶ್ ಜಾರಕಿಹೊಳಿ: ಮುಂದಿನ ನಡೆಯೇನು..!!

29 Dec 2018 9:53 AM | Politics
163 Report

ಸಮ್ಮಿಶ್ರ  ಸರ್ಕಾರದಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿವೆ.. ಇದೀಗ  ಸಂಪುಟ ಸಭೆಯಲ್ಲಿ ಸಚಿವ ಸ್ಥಾನ ಕಳೆದುಕೊಂಡು ಅಸಮಾಧಾನಗೊಂಡಿರುವಂತಹ  ಶಾಸಕ ರಮೇಶ್ ಜಾರಕಿಹೊಳಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದು ನಿಶ್ಚಿತವಾಗಿದ್ದು, ಯಾರ ಸಂಪರ್ಕಕ್ಕೂ ಸಿಗದೆ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಸಚಿವ ಸಂಪುಟದಿಂದ ವಜಾಗೊಂಡು 7 ದಿನಗಳಾದರೂ ಕೂಡ ತಮ್ಮ ಮುಂದಿನ ನಡೆಯ ಗುಟ್ಟೇನು ಎಂಬುದನ್ನು ಬಿಟ್ಟುಕೊಡದ ರಮೇಶ್ ಜಾರಕಿಹೊಳಿ ಅವರು ಬಹುತೇಕ ತಮ್ಮ ಆಪ್ತ ಏಳೆಂಟು ಮಂದಿ ಶಾಸಕರೊಂದಿಗೆ ಸದ್ಯದಲ್ಲೇ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ರಮೇಶ್ ಜಾರಕಿಹೊಳಿ ತಂತ್ರಗಾರಿಕೆ ಅನುಸರಿಸಲು ಮುಂದಾಗಿದ್ದಾರೆ. ಮೊದಲ ಕಂತಿನಲ್ಲಿ ಏಳೆಂಟು ಶಾಸಕರು ರಾಜೀನಾಮೆ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ

Edited By

Manjula M

Reported By

Manjula M

Comments