ನನಗೆ ಇರೋದು ಒಬ್ಬನೆ ಮಗ…ಅವನ ಮೇಲಾಣೆ ಅಂತ ಸಿಎಂ ಕುಮಾರಸ್ವಾಮಿ ಹೇಳಿದ್ದೇಕೆ..!?

28 Dec 2018 4:50 PM | Politics
1406 Report

ಸಿಎಂ ಕುಮಾರಸ್ವಾಮಿಯವರು ಸಾಲ ಮನ್ನಾ ವಿಚಾರವಾಗಿ ಸಾಕಷ್ಟು ತಲೆ ಕೆಡಿಸಿಕೊಂಡಿರುವುದು ಸತ್ಯದ ಮಾತು.. ಸಂಪೂರ್ಣ ಸಾಲ ಮನ್ನಾ ಮಾಡಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಹಾಗಾಗಿ ಸಿಎಂ ಕುಮಾರಸ್ವಾಮಿಯವರು ರೈತರ ಸಾಲಮನ್ನಾ ಮಾಡೇ ತೀರುತ್ತೇನೆ ಎಂದಿದ್ದಾರೆ. 

ನನಗೆ ಇರೋದು ಒಬ್ಬನೇ ಮಗ. ಅವನ ಮೇಲೆ ‌ಆಣೆ ಮಾಡಿ ಹೇಳ್ತೇನೆ, ನಾನು ರೈತರ ಸಂಪೂರ್ಣ ಸಾಲ‌ಮನ್ನಾ ಮಾಡುತ್ತೇನೆ ಅಂತ ಸಿಎಂ ಹೆಚ್​. ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಅವರು ಇಂದು ನಗರದ ಕಲಾ ಭವನದಲ್ಲಿ ನಡೆದ ರೈತರಿಗೆ ಋಣಮುಕ್ತ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು ಇದೇ ವೇಳೆ ಅವರು ಮಾತನಾಡುತ್ತ ಸರ್ಕಾರ ನಡೆಸುವ ಶಕ್ತಿ ನೀವು ಕೊಟ್ಟಿದ್ದೀರಿ. ನೀವು ನಮಗೆ ಶಕ್ತಿ ಕೊಡಿ ಎಂದು ತಿಳಿಸಿದರು…

Edited By

Manjula M

Reported By

Manjula M

Comments